ಆಧಾರ್‌ ಕಾರ್ಡನ್ನು ಪ್ರಶ್ನಿಸೋ ಜನ ಬಿಳಿಯರ ಮುಂದೆ ಬೆತ್ತಲಾಗಲೂ ಸಿದ್ದರಿರ್ತಾರೆ: BJP ಮುಖಂಡ

ತಿರುವನಂತಪುರಂ : ಭಾರತದಲ್ಲಿ ಒಂದಷ್ಟು ಮಂದಿ ಆಧಾರ್‌ ಮಾನ್ಯತೆಯನ್ನು ಪ್ರಶ್ನಿಸುತ್ತಾರೆ. ಆದರೆ ವೀಸಾಕ್ಕಾಗಿ ಬಿಳಿಯರ ಮುಂದೆ ಬೆತ್ತಲಾಗಲೂ ಸಿದ್ಧ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಕೆ.ಜೆ ಅಲ್ಫೋನ್ಸ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವೀಸಾ ಪಡೆಯುವುದಕ್ಕಾಗಿ ಬಿಳಿಯರ ಮುಂದೆ ಬೆತ್ತಲಾದರೂ ಪರವಾಗಿಲ್ಲ. ಆದನ್ನೆಲ್ಲ ಒಪ್ಪಿಕೊಳ್ಳುತ್ತಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಯಾವುದೇ ದಾಖಲೆ, ದತ್ತಾಂಶಗಳನ್ನು ಕೇಳಿದರೆ ಹರಿಹಾಯುತ್ತಾರೆ. ಇಂತಹ ಮನಸ್ಥಿತಿ ದೇಶದ ಅನೇಕ ಜನರಲ್ಲಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ನಿಮ್ಮ ದಾಖಲೆಗಳನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಾರೆ ಎಂದು ನೀವು ಭಾವಿಸಿದ್ದೀರಿ. ಆದರೆ ಅದೆಲ್ಲಾ ಸುಳ್ಳು. ನಿಮ್ಮ ಖಾಸಗಿತನದ ಸೋರಿಕೆಯಾಗುವುದಿಲ್ಲ. ಅದು ಸಂಪೂರ್ಣ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com