ಬಸವಣ್ಣನವರ ಬಗ್ಗೆ ಮಾತನಾಡಲು ಮೋದಿಗೆ ನೈತಿಕತೆ ಇಲ್ಲ : ಸಿದ್ದರಾಮಯ್ಯ

ಮೈಸೂರರಿನಲ್ಲಿ ನಡೆದ ಜನಾಶೀರ್ವಾದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ‘ ಇವತ್ತು ಒಂದು ಐತಿಹಾಸಿಕ ದಿನ ಎಂದು ಭಾವಿಸಿದ್ದೇನೆ. ಇಂತಹ ಬೃಹತ್ ಸಮಾವೇಶ ಎಂದೂ ಆಗಿರಲಿಲ್ಲಾ. ಇದನ್ನು ಆಯೋಜಿಸಿದ್ದ ಎಲ್ಲರಿಗೂ ಸರ್ಕಾರದಿಂದ ನಾನು ವತಿಯಿಂದ ಅಭಿನಂಧಿಸುತ್ತೇನೆ. ರಾಹುಲ್ ಗಾಂಧಿ ಅಧ್ಯಕ್ಷರಾದ ಮೇಲೆ ಜನಾರ್ಶಿರ್ವಾದದಲ್ಲಿ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದಾರೆ ‘

‘ ರಾಗಾ ಈಗಾಗಲೇ ಮೂರು ಪ್ರವಾಸ ಕೈಗೊಂಡಿದ್ದಾರೆ. ಗುಲ್ಬರ್ಗಾ, ಕರಾವಳಿ, ಮೈಸೂರಿನಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹೇಳಿದರೆ ತಪ್ಪಾಗದು. ರಾಹುಲ್ ಗಾಂಧಿ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ ‘

‘ ಈ ಚುನಾವಣೆ ಮಹತ್ತರ ಚುನಾವಣೆ ಅಂದು ನಾನು ಭಾವಿಸಿದ್ದೇನೆ. ಕೋಮುವಾದಿ ಪಕ್ಷ ಮೋದಿ ಪಕ್ಷ. ನಾಲ್ಕು ವರ್ಷದಲ್ಲಿ ಮೋದಿ ನುಡಿದಂತೆ ನಡೆಯಲಿಲ್ಲಾ. ಬಸವಣ್ಣರವರ ಬಗ್ಗೆ ಮಾತನಾಡಲು ಮೋದಿಗೆ ನೈತಿಕತೆ ಇಲ್ಲ ‘ ಎಂದರು.

‘ ಕಪ್ಪು ಹಣ ಹೊರ ತಂದು ದೇಶದ ಜನರ ಬ್ಯಾಂಕ್ ಗೆ ಹಾಕ್ತೀನಿ ಅಂದರು, ಆದರೆ ಇದುವರೆಗೂ ಹಾಕಿಲ್ಲಾ.  ಜನರನ್ನು ಮರಳು ಮಾಡೋಕೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳಿ ಮೋಸ ಮಾಡ್ತೀದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳೋ ಅರ್ಹತೆ ಕಾಂಗ್ರೆಸ್ ಗೆ ಇದೆ ‘

‘ ಎಲ್ಲರನ್ನೂ ಸಮಾನಾವಾಗಿ ನೋಡೋ ಒಂದೇ ಒಂದು ಪಕ್ಷ ಅಂದ್ರೆ ಅದು ಕಾಂಗ್ರೆಸ್. ಅವಕಾಶವಾದಿ ಪಕ್ಷ ಜೆಡಿಎಸ್ ಬೇಕಾ, ಶಾಂತಿ ಓಡೆಯುವ ಬಿಜೆಪಿ ಪಕ್ಷ ಬೇಕಾ,ಸಮಾನತೆಯಿಂದ ಕಾಣುವ ಕಾಂಗ್ರೆಸ್ ಪಕ್ಷ ಬೇಕಾ..? ‘ ಎಂದು ಕೇಳಿದರು.

‘ ದೇವೇಗೌಡ, ಕುಮಾರಸ್ವಾಮಿಗೆ ಗೊತ್ತಿದೆ 25 ಸ್ಥಾನವನ್ನು ಪಡೆದುಕೊಳ್ಳಲ್ಲಾ. ದೇವೇಗೌಡರು ಹೇಳ್ತಾರೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ದಲಿತ, ಅಲ್ಪ ಸಂಖ್ಯಾತರನ್ನು ಮುಖ್ಯ ಮಂತ್ರಿ ಮಾಡ್ತೀನಿ ಅಂತ. ಅದು ಸಾಧ್ಯವಿಲ್ಲಾ. ನಾನು ಕೊಟ್ಟ 165 ಭರವಸೆ ಯಲ್ಲಿ 158 ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆಯುತ್ತಿದ್ದೇವೆ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com