ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಂತು CM ರನ್ನು ಸೋಲಿಸುತ್ತೇನೆ, ಇದೇ ನನ್ನ ಸವಾಲ್‌ : C.T ರವಿ

ಮೈಸೂರು :  ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಿಂತು ಸಿದ್ದರಾಮಯ್ಯರನ್ನು ಎದುರಿಸಲು ನಾನು ಸಿದ್ಧ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ. ಒಪ್ಪಿಗೆ ಸಿಕ್ಕರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಸ್ಪರ್ಧಿಸಿ ಸಿದ್ದಾರಾಮಯ್ಯರನ್ನು ಸೋಲಿಸುತ್ತೇನೆ ಎಂದಿರುವ ಅವರು, ಸಿದ್ದರಾಮಯ್ಯ ಚಿಕ್ಕಮಗಳೂರಿಗೆ ಬಂದಾಗ ನನ್ನ ಹೆಸರನ್ನು ಸಿ.ಟಿ ರವಿ ಅಲ್ಲ, ಲೂಟಿ ರವಿ ಎಂದು ಅಣಕವಾಡಿದ್ದರು. ಯಾರು ಲೂಟಿ ಮಾಡಿದ್ದಾರೆಂದು ಸಾಬೀತು ಮಾಡಲು ಮಾರ್ಚ್‌ 26ರಂದು ಚಾಮುಂಡಿ ಬೆಟ್ಟಕ್ಕೆ ಬರುವುದಾಗಿ ಸವಾಲು ಹಾಕಿದ್ದೆ. ಅದರಂತೆ ಇಂದು ಬಂದಿದ್ದೇನೆ. ಈ ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ. ತಾಕತ್ತಿದ್ದರೆ ನನ್ನ ಸವಾಲನ್ನು ಸಿಎಂ ಸ್ವೀಕರಿಸಲಿ ಎಂದಿದ್ದಾರೆ.

ಚಾಮುಂಡಿ ಮೇಲೆ ಆಣಿ ಮಾಡಿ ಹೇಳುತ್ತೇನೆ. ಮುಂದಿನ ಬಾರಿ ಕಾಂಗ್ರಸ್‌ ಅಧಿಕಾರಕ್ಕೆ ಬರುವುದಿಲ್ಲ. ಈಗ ಎಲ್ಲರೂ ಸಿದ್ದರಾಮಯ್ಯನ ಬೆನ್ನಿಗೆ ನಿಂತಿದ್ದಾರೆ. ಚುನಾವಣೆ ಮುಗಿಯಲಿ ಆಮೇಲೆ ಕಾಂಗ್ರೆಸ್‌ನವರೇ ನಿಮ್ಮ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕುವುದಾಗಿ ಹೇಳಿದ್ದಾರೆ.

ಕೋಮುವಾದದ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್‌ ಎಂದು ಆರೋಪಿಸಿರುವ ರವಿ, ಕಿತ್ತೂರಿ ರಾಣಿ ಚೆನ್ನಮ್ಮನನ್ನು ಕೊಂದವರನ್ನು ವೈಭವೀಕರಿಸಿದವರು ಯಾರು , ಮೈಸೂರು ರಾಜಮನೆತನದವರನ್ನು ಅವಮಾನ ಮಾಡಿದ್ಯಾರು, ಶಾದಿ ಭಾಗ್ಯ ಒಂದೇ ವರ್ಗಕ್ಕೆ ಸೀಮಿತಗೊಳಿಸಿದವರ್ಯಾರು ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com