ಸಿನಿಮಾಗಳಲ್ಲಿ ಅವಕಾಶ ಬೇಕು ಎಂದ್ರೆ ನಟಿಯರು ಮಂಚ ಏರಬೇಕು : ಮಂಡ್ಯ ರಮೇಶ್‌

ಕನ್ನಡ ಸಿನಿಮಾಗಳಲ್ಲಿನ ಕಾಸ್ಟಿಂಗ್ ಕೌಚ್‌ ಬಗ್ಗೆ ಈಗ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್‌ ಬಾಯ್ಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ನಟಿಯರಿಗೆ ಅವಕಾಶ ಸಿಗಬೇಕು ಎಂದರೆ ಮಂಚಕ್ಕೆ ಏರಬೇಕು ಎಂಬ ವಾಚಾವರಣ ನಿರ್ಮಾಣವಾಗಿದೆ. ಅದು ಇಲ್ಲ ಎನ್ನುವ ಧೈರ್ಯ ನನಗಿಲ್ಲ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡ ಸಿನಿಮಾರಂಗ ಮಾತ್ರವಲ್ಲ, ತಮಿಳು, ತೆಲುಗು ಸೇರಿದಂತೆ ಭಾರತೀಯ ಚಿತ್ರರಂಗದ ಹಲವೆಡೆ ಹೊಸ ಅವಕಾಶಕ್ಕಾಗಿ ಮಂಚ ಏರಬೇಕೆಂಬ ವಾತಾವರಣವಿದೆ. ಮೊದಲಿನಿಂದಲೂ ಇದು ನಡೆಯುತ್ತಾ ಬಂದಿರುವುದು ನೋವಿನ ಸಂಗತಿ ಎಂದಿದ್ದಾರೆ.

ಇದೆಲ್ಲವೂ ಜನರಿಗೆ ತಿಳಿದಿದೆ. ಇದೆಲ್ಲವನ್ನು ಇಂದಿನ ಯುವ ಪೀಳಿಗೆ ಮೀರಿ ನಡೆಯಬೇಕು. ಇಂತಹ ಘಟನೆಗಳು ನಡೆಯದ ಕಾಲದಲ್ಲಿ ಚಿತ್ರರಂಗ ಇನ್ನಷ್ಟು ಆರೋಗ್ಯವಂತವಾಗಿ ಬೆಳೆಯುತ್ತದೆ. ರಂಗಭೂಮಿಗೂ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com