ಓಟಿಗಾಗಿ BJP ಯವರು ರಾಮನನ್ನು ಗುತ್ತಿಗೆ ಪಡೆದಿದ್ದಾರೆ : PGR ಸಿಂಧ್ಯಾ

ಮಾಗಡಿ : ಕೆಲವರು ಓಟಿಗಾಗಿ ರಾಮನನ್ನ ಗುತ್ತಿಗೆ ತೆಗೆದುಕೊಂಡಿದ್ದಾರೆ. ರಾಮನ ಹೆಸರಿನಲ್ಲಿ ಪಾದುಕೆ ಹಾಗೂ ಇಟ್ಟಿಗೆ ಯಾತ್ರೆ ನಡೆಸಿದ್ರು. ಯಾತ್ರೆ ಹೆಸರಿನಲ್ಲಿ ಹಣ ಸಂಗ್ರಹಿಸಿದ್ರು ಅದೆಲ್ಲಿಗೆ ಹೋಯ್ತು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ಮಾಗಡಿಯಲ್ಲಿ ನಡೆದ ವಿಕಾಸ ಪರ್ವ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಂಧ್ಯ, ಅಧಿಕಾರಕ್ಕಾಗಿ ಶ್ರೀರಾಮ ಬೇಕು, ಜನರ ಅಭಿವೃದ್ದಿಗಾಗಿ ಬಿಜೆಪಿಯವರು ಬೆಂಕಿ ಹಚ್ಚುತ್ತಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಅದಕ್ಕೆ ತುಪ್ಪ ಸುರಿಯತ್ತಿದೆ. ಜಾತಿ-ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಕಲಹ ಉಂಟು ಮಾಡಲು ಶುರುವಿಟ್ಟುಕೊಂಡಿದ್ದಾರೆ. ಇವರಿಗೆ ರಾಜ್ಯದ ಜನರ ಶ್ರೇಯೋಭಿವೃದ್ದಿಗಿಂತ ಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯ. ಅದಕ್ಕಾಗಿ ಮಾಡಬಾರದ್ದನ್ನು ಮಾಡಿ ಜನರಿಗೆ ತೊಂದರೆ ಕೊಡುತ್ತಿರುವುದಾಗಿ ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com