BSY ಕೆಜೆಪಿಯಲ್ಲಿದ್ದಾಗ ಪಕ್ಷದಿಂದ ಕಿತ್ತು ಹಾಕಲು ಜಗದೀಶ್‌ ಶೆಟ್ಟರ್‌ 10 ಕೋಟಿ ಆಮಿಷ ಒಡ್ಡಿದ್ರಂತೆ!

ಹುಬ್ಬಳ್ಳಿ: ಜಗದೀಶ ಶೆಟ್ಟರ್ ವಿರುದ್ಧ ಕೆಜೆಪಿಯ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಯಡಿಯೂರಪ್ಪ ಕೆಜಿಪಿಯಲ್ಲಿದ್ದಾಗ ಪಕ್ಷದಿಂದ ಕಿತ್ತು ಹಾಕಲು ಆಮಿಷ ಒಡ್ಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನನಗೆ 10 ಕೋಟಿ ರೂ. ಆಮಿಷ ಒಡ್ಡಿದ್ದರು. ನಾನು ಇವತ್ತು ಇಲ್ಲಿಗೆ ಕೂತಿರೋದು ಯಡಿಯೂರಪ್ಪ ಆಶೀರ್ವಾದದಿಂದಾಗಿ. ಆದರೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಅವರ ಪಿಎ ವಸಂತ ಬಂಗೇರ ಮೂಲಕ ನನ್ನನ್ನು ಅವರ ಮನೆಗೆ ಕರೆದಿದ್ದರು. ಬಳಿಕ ಯಡಿಯೂರಪ್ಪನವರನ್ನ ನೀವು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಹಾಗೆ ಮಾಡಿದೆ ನಿಮಗೆ 10 ಕೋಟಿ ರೂಪಾಯಿ ಕೊಡ್ತೇನೆ ಅಂತ ನನಗೆ ಆಮಿಷ ಒಡ್ಡಿರುವುದಾಗಿ ಆರೋಪಿಸಿದ್ದಾರೆ.

ಇದು ಸತ್ಯವಾದ ಮಾತು, ನಾನು ಎಲ್ಲೂ ಆ ವಿಚಾರ ಪ್ರಸ್ತಾಪ ಮಾಡಿರಲಿಲ್ಲ. ಈ ಸಮಯಕ್ಕೋಸ್ಕರ ನಾನು ಕಾಯ್ತಾಯಿದ್ದೆ, ಈವರೆಗೂ ಇದನ್ನ ಎಲ್ಲಿಯೂ ಹೇಳಿಲ್ಲ. ಜಗದೀಶ ಶೆಟ್ಟರ್‌ಗೆ ನಾನು ನಾಲಿಗೆ ಕೊಯ್ದುಬಿಡ್ತೀನಿ, ಯಾವುದಕ್ಕೂ ನೀವು ಆಮಿಷ ಕೊಡ್ಬೇಡಿ. ನಾನು ಯಾವುದೇ ಕಾರಣಕ್ಕೂ ದುಡ್ಡಿನ ಆಮಿಷಕ್ಕೂ ಒಳಗಾಗೋದಿಲ್ಲ ಎಂದಿದ್ದೆ. ಲಿ ಮೆರಿಡಿಯನ್ ಹೋಟೆಲ್‌ಗೆ ಹಣ ತಂದಿದ್ದರು. ನಾನು ಅದನ್ನು ಸ್ವೀಕರಿಸದೇ, ನ್ಯಾಯ, ನೀತಿ, ಸತ್ಯ-ಧರ್ಮದ ಮೆಟ್ಟಿಲಿನ ಮೇಲೆ ನಿಂತು ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com