ಕಾಂಗ್ರೆಸ್‌ ನಿರ್ನಾಮ ಮಾಡುವುದು ಈ ಸಿದ್ದರಾಮಯ್ಯನವರೇ ಅಂತ ಎಲ್ಲರಿಗೂ ಗೊತ್ತಿದೆ : HDK

ಮಾಗಡಿ : ಜೆಡಿಎಸ್ ಪಕ್ಷ 20 ರಿಂದ 40 ಸ್ಥಾನ ಬರುವುದಿಲ್ಲ ಎಂದು ಇಲ್ಲಿನ ಶಾಸಕರು ಹೇಳಿ ಹೋಗಿದ್ದರು. ಆದರೆ ಜನರೇ ಅದಕ್ಕೆ ಇಂದು ಉತ್ತರ ನೀಡಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ಮಾಗಡಿಯಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷ ಬಿಟ್ಟು ಹೋದ 7 ಮಂದಿ ಶಾಸಕರಿಗೆ ಟಾಂಗ್ ನೀಡಿದ್ದು, ಅಂತಹವರ ಬಗ್ಗೆ ಮಾತನಾಡಿ ಕೆಸರಿನ ಮೇಲೆ ಕಲ್ಲು ಹಾಕಲು ಇಷ್ಟಪಡಲ್ಲ. ನಮ್ಮಲ್ಲಿದ್ದ ಕೆಸರು ಇಂದು ದೂರವಾಗಿದೆ. ಎರಡು ವರ್ಷಗಳ ಹಿಂದೆ ನನಗೆ ಟೋಪಿ ಹಾಕಿ ಹೋಗಿದ್ದಾರೆ. ನಿಮ್ಮ ಆಶಿರ್ವಾದ ನನಗೆ ಬಹಳ ಮುಖ್ಯ. ರಾಹುಲ್‌ , ಸಿದ್ದರಾಮಯ್ಯ, ಬಿಜೆಪಿಯಿಂದ ಪ್ರಧಾನಿ ಅಮಿತ್ ಶಾ ರಾಜ್ಯದಲ್ಲಿ ಬಂದು ಹೋಗುತ್ತಿದ್ದಾರೆ. ರಾಹುಲ್ ಭಾಷಣ ನೋಡಿದ್ರೆ ಅವರು ಸಿದ್ದರಾಮಯ್ಯ ಅವರ ಪಂಜರದ ಗಿಳಿಯಾಗಿದ್ದಾರೆ ಎಂದು ತಿಳಿಯುತ್ತದೆ. ಜೆಡಿಎಸ್ ಸಂಘ ಪರಿವಾರ ಅಂತಾ ರಾಹುಲ್ ಹೇಳಿದ್ದಾರೆ. ಕಾವೇರಿ ನದಿ ನೀರು ಹರಿಯುವ ಪ್ರದೇಶದಲ್ಲಿ ಬಂದು ಜೆಡಿಎಸ್ ಪಕ್ಷವನ್ನ ಕೆಣಕಿದ್ದೀರಿ. ಇದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡುವುದು ಸತ್ಯ ಎಂಬುದು ಪರಮೇಶ್ವರ್ ಹಾಗು ಖರ್ಗೆ ಅವರಿಗೆ ಚನ್ನಾಗಿ ಗೊತ್ತಿದೆ. ರಾಜ್ಯಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರದ ಕೊಡುಗೆ ಏನು ಎಂಬ ಬಗ್ಗೆ ರಾಜ್ಯದ ಜನತೆಯಲ್ಲಿ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುತ್ತೇವೆ. ಕೇವಲ ಸಾಲ ಮನ್ನಾ ದಿಂದ ರೈತರ ಬದುುಕು ಸರಿಯಾಗುವುದಿಲ್ಲ. ಅದಕ್ಕೆ ಇಂತಹ ಹೊಸ ಹೊಸ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ಹೊರ ದೇಶಕ್ಕೆ ಹೋಗಿದ್ದೆ ಎಂದಿದ್ದಾರೆ.

Leave a Reply

Your email address will not be published.