ನಂದು ಸ್ವಾತಿ ನಕ್ಷತ್ರ, ನಂಗೆ ತೊಂದರೆ ಕೊಟ್ಟವರು ಯಾರೂ ಉಳಿಯಲ್ಲ : H.D ರೇವಣ್ಣ

ಹಾಸನ : ಏಪ್ರಿಲ್ 2ರಂದು ಹಾಸನದಲ್ಲಿ ಜೆಡಿಎಸ್ನ ಬೃಹತ್‌ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮಾಜಿ ಪ್ರದಾನಿ ದೇವೆಗೌಡ, ಪಿಜಿಆರ್ ಸಿಂದ್ಯ, ಬಿಎಸ್ಪಿ ರಾಜ್ಯಾದ್ಯಕ್ಷರೂ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ರೇವಣ್ಣ ಮಾಹಿತಿ ನೀಡಿದ್ದಾರೆ.
ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿಯ ಬಿ.ಟೀಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ ಈ ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನೂ‌ ಎಂಬುದನ್ನು ವಿಸ್ತಾರವಾಗಿ ‌ತಮ್ಮ‌ ಗಮನಕ್ಕೆ ತರುತ್ತೇವೆ. ಕಾಂಗ್ರೆಸ್ ಗೆ ರಾಷ್ಟ್ರದಲ್ಲಿ ಬೆಲೆ ಇತ್ತು. ಆದರೀಗ ರೋಡ್ ಗೆ ಬಂದು‌ನಿಂತಿದೆ. ಕಾಂಗ್ರೆಸ್ ಪರಿಸ್ಥಿತಿ ನೋಡಿ ನನಗೆ‌ ವ್ಯಥೆ ಆಗುತ್ತಿದೆ. ಪಕ್ಷದ ಹೈಕಮಾಂಡ್ ರಸ್ತೆಗೆ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.


ಸಮಾವೇಶ ಮಾಡುವ‌ ಮೂಲಕ ಯಾರಿಗೂ ಕೌಂಟರ್ ಕೊಡುವ ‌ಅವಶ್ಯಕತೆ ನಮಗಿಲ್ಲ. ರಾಹುಲ್ ಗಾಂಧಿಯಿಂದ ದೇವೇಗೌಡರು ಕಲಿಯುವ ಅವಶ್ಯಕತೆ ಇಲ್ಲ. ಯುಪಿಎ ಸರ್ಕಾರ ಇದ್ದಾಗ ಅಡ್ಜೆಸ್ಟ್ ಮಾಡಿಕೊಂಡು ಸರ್ಕಾರ ನಡೆಸಿದವರು ಯಾರು. ರಾಹುಲ್ ಗಾಂಧಿ ಬಳಿ ಹೇಳಿಸಿಕೊಳ್ಳುವ ಅವಶ್ಯಕತೆ ದೇವೇಗೌಡರಿಗಿಲ್ಲ. ದೆವೇಗೌಡರ 10ತಿಂಗಳ ಅಧಿಕಾರವನ್ನು ಕಡತ ತೆಗೆಸಿ ನೋಡಿದ್ದಾರೆ. ಯಾವುದೇ ತಪ್ಪಿಲ್ಲ ಹಾಗಾಗಿ ಸುಮ್ಮನಿದ್ದಾರೆ. ಇಲ್ಲವೆಂದರೆ ಮೋದಿ ಏನಾದ್ರು ಮಾಡಿ ಕಿರುಕುಳ ನೀಡುತಿದ್ದರು ಎಂದು ಆರೋಪಿಸಿದ್ದಾರೆ.
ಆ ಜ಼ಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ರೆ ನಾನು ಪೊಳ್ಳಾಗಿಹೋಗುತ್ತೇನೆ. ನಾನು ಮತ್ತು ಸಹೋದರ ಕುಮಾರಸ್ವಾಮಿ ಜಗಳ ಆಡುತ್ತೀವಿ ಅಂದುಕೊಂಡಿದ್ರೆ ಅದು ಸಾದ್ಯವಾಗಲ್ಲ. ದೇವರಾಜು ಅರಸು ದೇವೇಗೌಡರನ್ನು ಕಾಂಗ್ರೆಸ್ ಗೆ ಸೇರಿಸಲು ಪ್ರಯತ್ನಿಸಿದರು. ಆದ್ರೆ ದೇವೇಗೌಡರು ನೈತಿಕತೆ ಇರುವುದರಿಂದ ಇನ್ನು ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಮೂಲ‌ ಕಾಂಗ್ರೆಸ್ ನವರು‌ ಮೂಲೆ ಸೇರಿದ್ದಾರೆ.ನನ್ನದು ಸ್ವಾತಿ ನಕ್ಷತ್ರ. ನನಗೇನಾದ್ರು ತೊಂದ್ರೆ‌ ನೀಡಿದ್ರೆ ಅವರೇ ಉಳಿಯೋದಿಲ್ಲ. ಈ ತರಹದವರೆನ್ನಲ್ಲ ನಾನು ಎಷ್ಟು‌ಮಂದಿ ನೋಡಿದಿನಿ.ನಾನು ಹೆದರುವವನಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com