ಪತ್ನಿಯನ್ನು ಬಳಸಿಕೊಂಡು ಹನಿಟ್ರ್ಯಾಪ್ : ದಂಪತಿಗಳನ್ನು ಬಂಧಿಸಿದ ಪೋಲೀಸ್

ಪತ್ನಿಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿಗಳನ್ನು ನಗರದ ಪೋಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಮತ್ತ ರೇಖಾ ದಂಪತಿಗಳು  ಬಾವೀಶ್ ಎಂಬ ಬಂಗಾರದ ವ್ಯಾಪಾರಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾರೆ.

ಬಾವೀಶ್ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿ ಆತನೊಂದಿಗೆ ಸ್ನೇಹ ಸಂಪಾದಿಸಿದ್ದಾರೆ. ಬಾವೀಶ್ ನನ್ನು‌ ಮನೆಗೆ ಕರೆಸಿ ಆತನೊಂದಿಗೆ ವೆಂಕಟೇಶ್ ಪತ್ನಿ ರೇಖಾ ಅಶ್ಲೀಲವಾಗಿ ನಡೆದುಕೊಂಡಿದ್ದಾಳೆ. ಇದನ್ನು ಪತಿ ವೆಂಕಟೇಶ್ ಸ್ವತಃ ಚಿತ್ರೀಕರಣ ಮಾಡಿ ೧೫ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

‘ ಹಣ ಕೊಡದಿದ್ದರೇ ವಿಡಿಯೋ ವೈರಲ್ ಮಾಡುವ ಎಚ್ಚರಿಕೆ ನೀಡಿದ್ದಾನೆ. ವೆಂಕಟೇಶ್ ಬೆದರಿಕೆಗೆ ಹೆದರಿದ ಬಾವೀಶ್ ಐದು ಲಕ್ಷ ಹಣ ನೀಡಿದ್ದಾನೆ. ಉಳಿದ ಹತ್ತು ಲಕ್ಷ ಹಣಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದ. ನೊಂದ ಬಾವೀಶ್ ನಿಂದ ಬಸವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ದೂರಿನ ಆಧಾರದ ಮೇಲೆ ವೆಂಕಟೇಶ್ ರೇಖಾ ದಂಪತಿಗಳನ್ನು ಪೋಲೀಸರು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com