ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ – ಎಲ್ಲಿ ಅವ್ರಾಮ್..!

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ಎಲ್ಲಿ ಅವ್ರಾಮ್ ಭಾನುವಾರ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬೇರೆ ಬೇರೆ ಕಾರುಗಳಲ್ಲಿ ಸ್ಥಳಕ್ಕೆ ಆಗಮಿಸಿದ ಹಾರ್ದಿಕ್ ಹಾಗೂ ಎಲ್ಲಿ ಅವ್ರಾಮ್, ಕ್ಯಾಮೆರಾ ಕಣ್ಣಿಗೆ ಜೊತೆಯಾಗಿ ಸೆರೆಯಾಗದಂತೆ ಎಚ್ಚರ ವಹಿಸಿದ್ದಾರೆ.

ಕಳೆದ ಕೆಲ ವಾರಗಳಲ್ಲಿ ಪಾಂಡ್ಯ ಹಾಗೂ ಎಲ್ಲಿ ಅವ್ರಾಮ್, ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಗೋರೆಗಾಂವ್ ನ ಫಿಲ್ಮಿಸ್ತಾನ್ ಶೂಟಿಂಗ್ ಸೆಟ್ ನಲ್ಲಿ ಹಾರ್ದಿಕ್ ಪಾಂಡ್ಯ ಜಾಹೀರಾತಿನ ಶೂಟಿಂಗ್ ನಡೆಯುತ್ತಿತ್ತು. ಅದೇ ಶೂಟಿಂಗ್ ಸ್ಥಳದಲ್ಲಿ ಎಲ್ಲಿ ಅವ್ರಾಮ್ ಆಗಮಿಸಿದ್ದರು.

hardik pandya elli avram spotted ಗೆ ಚಿತ್ರದ ಫಲಿತಾಂಶ

ಸಂಬಂಧಿತ ಚಿತ್ರ

ಕಳೆದ ಡಿಸೆಂಬರ್ ನಲ್ಲಿ ನಡೆದ ಹಾರ್ದಿಕ್ ಸೋದರ ಕೃಣಾಲ್ ಪಾಂಡ್ಯ ಮದುವೆ ಸಮಾರಂಭದಲ್ಲಿಯೂ ಎಲ್ಲಿ ಅವ್ರಾಮ್ ಭಾಗಿಯಾಗಿದ್ದರು. 27 ವರ್ಷದ ಎಲ್ಲಿ ಅವ್ರಾಮ್ ಹಾಗೂ 24 ವರ್ಷದ ಹಾರ್ದಿಕ್ ಪಾಂಡ್ಯ ತಮ್ಮಿಬ್ಬರ ಸಂಬಂಧದ ಬಗ್ಗೆ ಇದುವರೆಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ.

ಸಂಬಂಧಿತ ಚಿತ್ರ

Leave a Reply

Your email address will not be published.