ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಹಾಸ್ಟೆಲ್‌ ವಾರ್ಡನ್‌ : ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ !

ಭೋಪಾಲ್‌ : ಮಧ್ಯಪ್ರದೇಶದ ಭೋಪಾಲ್‌ ನ ಹಾಸ್ಟೆಲ್‌ ಒಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಹಾಸ್ಟೆಲ್‌ ಕಾರಿಡಾರ್‌ನಲ್ಲಿ ಬಳಸಿ ಬಿಸಾಡಿದ ಸ್ಯಾನಿಟರಿ ನ್ಯಾಪ್ಕಿನ್‌ ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳಾ ವಾರ್ಡನ್‌ ಹಾಸ್ಟೆಲ್‌ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿದ್ದಾರೆ.

ಡಾ. ಎಚ್‌.ಎಸ್‌ ಗೌರ್‌ ಸೆಂಟ್ರಲ್‌ ಯೂನಿವರ್ಸಿಟಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಕುರಿತು ಉಪಕುಲಪತಿ ಪ್ರೊ. ತಿವಾರಿ ಅವರಿಗೆ ವಾರ್ಡನ್ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

ಭಾನುವಾರ ಹಾಸ್ಟೆಲ್‌ನ ಕಾರಿಡಾರ್‌ ಬಳಿ ನ್ಯಾಪ್ಕಿನ್‌ ಪತ್ತೆಯಾಗಿದೆ. ನ್ಯಾಪ್ಕಿನ್‌ ಎಸೆದವರು ಯಾರು ಎಂದು ಪತ್ತೆ ಮಾಡಲು ಮಹಿಳಾ ವಾರ್ಡನ್ ಯಾರು ಮುಟ್ಟಾಗಿದ್ದಾರೆ ಎಂದು ತಿಳಿಯಲು ವಿದ್ಯಾರ್ಥಿಯರನ್ನು ಒಟ್ಟು ಸೇರಿಸಿ ಒಬ್ಬೊಬ್ಬರನ್ನೇ ಬಟ್ಟೆ ಬಿಚ್ಚಿಸಿ ಪರೀಕ್ಷಿಸಿದ್ದಾರೆ.

ಈ ಸಂಬಂಧ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ನಾನು ಆ ರೀತಿ ಮಾಡಿಲ್ಲ ಎಂದು ವಾರ್ಡನ್‌ ಹೇಳುತ್ತಿದ್ದಾರೆ. ಮೂರು ದಿನದೊಳಗೆ ಸಮಿತಿಯು ವಿಚಾರಣೆ ನಡೆಸಿ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com