WATCH : ವಾರ್ನ್ ರಂತೆ ಬಾಲ್ ಎಸೆಯುವ 6 ವರ್ಷದ ಪೋರ : ಆಸೀ ಲೆಗ್ ಸ್ಪಿನ್ನರ್ ಮೆಚ್ಚುಗೆ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಶೇನ್ ವಾರ್ನ್ ವಿಶ್ವದ ಶ್ರೇಷ್ಟ ಲೆಗ್ ಸ್ಪಿನ್ ಬೌಲರ್ ಗಳಲ್ಲಿ ಒಬ್ಬರು. ಶೇನ್ ವಾರ್ನ್ ಫ್ಲಿಪ್ಪರ್, ಲೆಗ್ ಸ್ಪಿನ್, ಗೂಗ್ಲಿ ಮುಂತಾದ ಎಸೆತಗಳಿಂದ ಎದುರಾಳಿ ತಂಡದ ಬ್ಯಾಟ್ಸಮನ್ ಗಳ ವಿಕೆಟ್ ಉರುಳಿಸುತ್ತಿದ್ದರು. ಇಂಗ್ಲೆಂಡ್ ಬ್ಯಾಟ್ಸಮನ್ ಮೈಕ್ ಗ್ಯಾಟಿಂಗ್ ಅವರಿಗೆ ವಾರ್ನ್ ಎಸೆದ ಲೆಗ್ ಬ್ರೇಕ್, ‘ ಶತಮಾನದ ಎಸೆತ ‘ ವೆಂದೇ ಖ್ಯಾತಿಯಾಗಿದೆ.

ಇದೀಗ ಪಾಕಿಸ್ತಾನದ ಕ್ವೆಟ್ಟಾ ಪ್ರದೇಶದ 6 ವರ್ಷದ ಪೋರನೊಬ್ಬ, ಥೇಟ್ ಶೇನ್ ವಾರ್ನ್ ಅವರಂತೆಯೇ ಬಾಲ್ ಮಾಡುವುದನ್ನು ರೂಢಿಸಿಕೊಂಡಿದ್ದಾನೆ. ಅಲಿ ಮೆಕಾಲಿ ಹೆಸರಿನ ಈ ಬಾಲಕ ಲೆಗ್ ಸ್ಪಿನ್, ಫ್ಲಿಪ್ಪರ್, ಗೂಗ್ಲಿ, ಸ್ಲೈಡರ್ ಬಾಲ್ ಗಳನ್ನು ಎಸೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ.

ಈತ ಬೌಲಿಂಗ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುವ ಶೇನ್ ವಾರ್ನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಟ್ವೀಟ್ ಸಹ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.