ಪುಸ್ತಕ ಬರೆಯಲಿದ್ದಾರಂತೆ ಕತ್ರಿನಾ ಕೈಫ್ : ಸಿನಿ ಪಯಣದ ಕಥೆ ಹೇಳಲಿರುವ ಬಾಲಿವುಡ್ ಬೆಡಗಿ

ಹಿಂದಿ ಚಲನಚಿತ್ರ ರಂಗದ ಟಾಪ್ ನಾಯಕ ನಟಿಯರಲ್ಲಿ ಒಬ್ಬರಾಗಿರುವ ಕತ್ರಿನಾ ಕೈಫ್ ತಮ್ಮ ಸಿನಿ ಪಯಣದ ಬಗ್ಗೆ ಪುಸ್ತಕ ಬರೆಯಲಿದ್ದಾರಂತೆ. ಹೌದು, ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಂಡ ಏಳು – ಬೀಳುಗಳ ಕಥೆಯನ್ನು ಪುಸ್ತಕದ ಮೂಲಕ ಅಭಿಮಾನಿಗಳಿಗೆ ತಲುಪಿಸುವ ಬಗ್ಗೆ 34 ವರ್ಷದ ಕತ್ರಿನಾ ಕೈಫ್ ಯೋಚಿಸುತ್ತಿದ್ದಾರಂತೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕತ್ರಿನಾ ಈ ವಿಷಯವನ್ನು ಹೊರಹಾಕಿದ್ದಾರೆ. ನಿಮಗೆ ಸಂಪೂರ್ಣ ಅಪರಿಚಿತವಾಗಿದ್ದ ಬಾಲಿವುಡ್ ವಾತಾವರಣದಲ್ಲಿ ಹೇಗೆ ಹೊಂದಿಕೊಂಡಿರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ ‘ ಈ ಬಗ್ಗೆ ಈಗಲೇ ಉತ್ತರವನ್ನು ಹೇಳುವುದಿಲ್ಲ. ನನ್ನ ಸಿನೆಮಾ ರಂಗದ ಅನುಭವಗಳ ಬಗ್ಗೆ ಪುಸ್ತಕವನ್ನು ಬರೆಯಲು ಗಂಭೀರವಾಗಿ ಯೋಚಿಸುತ್ತಿದ್ದೇನೆ ‘ ಎಂದಿದ್ದಾರೆ.

Image result for katrina kaif book write

2003 ರಲ್ಲಿ ಬಿಡುಗಡೆಯಾದ ‘ ಬೂಮ್ ‘ ಚಿತ್ರದ ಮೂಲಕ ಕತ್ರಿನಾ ಕೈಫ್ ಬಾಲಿವುಡ್ ಚಿತ್ರ ರಂಗವನ್ನು ಪ್ರವೇಶಿಸಿದ್ದರು. ಆರಂಭದ ದಿನಗಳಲ್ಲಿ ಕತ್ರಿನಾ ಅಭಿನಯದ ಬಗ್ಗೆ ಸಿನೆಮಾ ರಂಗದಲ್ಲಿ ಟೀಕೆ ಕೇಳಿ ಬಂದಿತ್ತು.

ನಂತರದ ವರ್ಷಗಳಲ್ಲಿ ವೆಲ್ ಕಮ್, ಪಾರ್ಟ್ನರ್, ಏಕ್ ಥಾ ಟೈಗರ್, ಜಿಂದಗಿ ನಾ ಮಿಲೇಗಿ ದೊಬಾರಾ, ಬ್ಯಾಂಗ್ ಬ್ಯಾಂಗ್ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ಕತ್ರಿನಾ ಸ್ಟಾರ್ ನಟಿ ಎನಿಸಿಕೊಂಡರು.

Leave a Reply

Your email address will not be published.