ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಹೋಗಿದ್ದೇ ತಪ್ಪಾಯ್ತು, ಈ ಮುಸ್ಲಿಂ ಯುವತಿಗೆ ಆಗಿದ್ದೇನು..?

ಶಿವಮೊಗ್ಗ : ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿಯೊಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಮುಸ್ಲಿಂ ಸಮುದಾಯದ ಯುವಕರು ಅವರಿಗೆ ಕಿರುಕುಳ ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮುಸ್ಲಿಂ ಯುವತಿ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತನ್ನ ಹಿಂದೂ ಕ್ಲಾಸ್‌ಮೇಟ್‌ ಹುಡುಗನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಕೆಲ ಮುಸ್ಲಿಂ ಯುವಕರು ಬೈಕನ್ನು ಅಡ್ಡಗಟ್ಟಿದ್ದು, ಯುವತಿಯ ಸ್ಕೂಟರ್‌, ಮೊಬೈಲ್‌ ಹಾಗೂ ಹಣ ಕಿತ್ತುಕೊಂಡು ಹಿಂಸೆ ನೀಡಿದ್ದಾರೆ.

ಅಲ್ಲದೆ ಅನ್ಯ ಧರ್ಮದ ಹುಡುಗನ ಜೊತೆ ಓಡಾಡುತ್ತೀಯ ಎಂದು ನಿಂದಿಸಿದ್ದು, ಆಕೆಯ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಅಲ್ಲದೆ ಆಕೆಯ ಫೋಟೋಗಳನ್ನು ತಮ್ಮ ಮೊಬೈಲ್‌ಗೆ ಹಾಕಿಕೊಂಡು ತಮ್ಮ ಇತರೆ ಗ್ರೂಪ್‌ಗಳಲ್ಲಿ ಹರಿಬಿಟ್ಟಿದ್ದಾರೆ.

ದೊಡ್ಡಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.

 

Leave a Reply

Your email address will not be published.