ಅಪ್ಪ-ಮಗಳ ಸಾವಿಗೆ ಕಾರಣವಾಯ್ತು Facebook ಪೋಸ್ಟ್‌ : ಅದರಲ್ಲಿ ಅಂತದ್ದೇನಿತ್ತು ?

ರಾಯಚೂರು : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ್ದ ವಿಚಾರ ಸಂಬಂಧ ತಂದೆ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಯಚೂರಿನ  ಸಿಂಧನೂರು ಸಮೀಪದ ಗೌಡನಬಾವಿಯ ರಾಮನ ಗೌಡ (55) ಪುತ್ರಿ, ಬಸವಲಿಂಗಮ್ಮ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಕೆಲ ಯುವಕರು ಬಸವಲಿಂಗಮ್ಮ ಅವರ ಫೋಟೋ ತೆಗೆದು ಫೇಸ್‌ಬುಕ್‌ ಪೋಸ್ಟ್ ಮಾಡಿದ್ದರು. ಇದೇ ವಿಚಾರ ಸಂಬಂಧ ಜಗಳ ನಡೆದಿದೆ. ಈ ವೇಳೆಬಸವಲಿಂಗಮ್ಮ ಕಡೆಯವರ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಇದರಿಂದ ಮನನೊಂದ ರಾಮನಗೌಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆಯ ಸಾವಿನ ಬಳಿಕ ಬಸವಲಿಂಗಮ್ಮ ಸಹ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು. ಗ್ರಾಮದಲ್ಲಿ ಉದ್ವಿಗ್ ಪರಿಸ್ಥಿತಿ ಏರ್ಪಟ್ಟಿದೆ.

ಸ್ಥಳಕ್ಕೆ ಬಳಗಾನೂರು ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com