ರಾಮನವಮಿ ದಿನ ಇದೊಂದು ಕೆಲಸ ಮಾಡಿದ್ರೆ ಸಾಕು ಏಳು ಜನ್ಮಗಳ ಪಾಪ ಪರಿಹಾರವಾಗುತ್ತೆ !

ಇಂದು ರಾಮನವಮಿ ಹಬ್ಬ. ಈ ದಿನ ಕೆಲ ಕೆಲಸಗಳನ್ನು ಮಾಡಿದರೆ ಕೋಟಿ ಜನ್ಮದ ಪಾಪಗಳು ಪರಿಹಾರವಾಗುತ್ತವೆ ಎಂದು ಪುರಾಣಗಳು ಹೇಳುತ್ತವೆ.

ರಾಮನನ್ನು ಆದರ್ಶ ಪುರುಷ. ಮರ್ಯಾದಾ ಪುರುಶೋತ್ತಮ ಎಂದೆಲ್ಲಾ ಕರೆಯುತ್ತಾರೆ. ಜೀವನದುದ್ದಕ್ಕೂ ಆದರ್ಶಗಳನ್ನ ಪಾಲನೆ ಮಾಡಿದ ಆತನನ್ನು ಇಂದು ಅನೇಕ ಮಂದಿ ಆರಾಧನೆ ಮಾಡುವುದು ವಾಡಿಕೆ.

ರಾಮನವಮಿಯ ದಿನ ಬೇರೆ ಯಾವ ಕೆಲಸ ಮಾಡಲು ಸಾಧ್ಯವಾಗದಿದ್ದರೂ ರಾಮನಾಮ ಜಪ ಮಾಡಬೇಕೆಂದು ಹೇಳಲಾಗುತ್ತದೆ. ರಾಮನ ನಾಮವೇ ಅದ್ಭುತವಾದದ್ದಾಗಿದ್ದು, ನಾಮಸ್ಮರಣೆಯಿಂದ ಸಕಲ ಪಾಪಗಳೂ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಪುರಂದರ ದಾಸರು ರಾಮನಾಮ ಪಾಯಸಕ್ಕೆ, ಕೃಷ್ಣನಾಮ ಸಕ್ಕರೆ ಎಂದಿರುವುದು.

4 R

ರಾಮನವಮಿಯ ದಿನ ರಾಮನ ಹೆಸರಿನ ಒಂದೊಂದು ಅಕ್ಷರವನ್ನು ಜಪಿಸಿದರೂ ಆತನ ಆದರ್ಶ ಗುಣಗಳು ನಮ್ಮ ಜೀವನದಲ್ಲಿ ಒಂದಾಗುತ್ತದೆ ಎಂಬ ಮಾತಿದೆ. ಅಲ್ಲದೆ ರಾಮಕೋಟಿ ಬರೆಯಲು ಇಂದು ಶುಭ ಸಂದರ್ಭವಾಗಿದ್ದು. ಕಟ್ಟು ನಿಟ್ಟಾಗಿ, ನಿರ್ಮಲ ಮನಸ್ಸಿನಿಂದ ಬರೆದರೆ ಸಕಲ ಪಾಪಗಳೂ ಪರಿಹಾರವಾಗಿ ಸುಖ ಜೀವನ ನಿಮ್ಮದಾಗುತ್ತದೆ.

ರಾಮಕೋಟಿ ಬರೆಯುವುದು ಹೇಗೆ ?

ರಾಮಕೋಟಿ ಬರೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ರಾಮಕೋಟಿ ಬರೆಯುವ ವೇಳೆ ಅನಹಗತ್ಯ ಕೆಲಸ, ಹರಟೆ ಮಾಡಬಾರದು. ಮಲಗಿಕೊಂಡು, ನಮಗೆ ಬೇಕೆನಿಸಿದ ರೀತಿ ವರ್ತಿಸುತ್ತಾ ಬರೆಯಬಾರದು. ಹಸಿರು ಬಣ್ಣದ ಇಂಕ್‌ ನಿಂದ ಬರೆದರೆ ಒಳ್ಳೆಯದು ಎಂದು ಹೇಳುತ್ತಾರೆ. ಅಲ್ಲದೆ ಮಹಿಳೆಯರು ಮುಟ್ಟಾದಾಗ, ವೃದ್ಧಿ, ಸೂತಕದ ಸಮಯದಲ್ಲೂ ಬರೆಯಬಾರದು. ಪುನರ್ವಸು ನಕ್ಷತ್ರದ ದಿನದಿಂದ ಆರಂಭಿಸ ಅದೇ ನಕ್ಷತ್ರದ ದಿನದಂದು ಮುಗಿಸಿ, ಬಳಿಕ ಸಾಧ್ಯವಾದಷ್ಟು ಮಂದಿಗೆ ಅನ್ನಸಂತರ್ಪಣೆ ಮಾಡಿದರೆ ರಾಮ ಸಂತೃಪ್ತನಾಗುತ್ತಾನೆ ಎಂದು ಹೇಳಲಾಗುತ್ತದೆ.

ಆದ್ದರಿಂದ ರಾಮನವಮಿಯ ದಿನ ರಾಮಕೋಟಿ ಬರೆದರೆ ಸಕಲ ಪಾಪವೂ ಪರಿಹಾರವಾಗಿ, ಸುಖೀ ಜೀವನ ನಿಮ್ಮದಾಗುತ್ತದೆ.

 

Leave a Reply

Your email address will not be published.

Social Media Auto Publish Powered By : XYZScripts.com