ಹೆಚ್ಚು ಮಾರ್ಕ್ಸ್‌ ಬೇಕೆಂದರೆ ನನಗೊಂದು ಕಿಸ್‌ ಕೊಡು ಎಂದ ಶಿಕ್ಷಕ…ಆಮೇಲಾಗಿದ್ದೇನು..?

ಮುಂಬೈ : ಪರೀಕ್ಷೆಯಲ್ಲಿ ನಿನಗೆ ಹೆಚ್ಚು ಅಂಕ ನೀಡಬೇಕೆಂದರೆ ನನಗೆ ಒಂದು ಕಿಸ್‌ ಕೊಡು ಎಂದು ಶಿಕ್ಷಕನೊಬ್ಬ 17 ವರ್ಷದ ವಿದ್ಯಾರ್ಥಿನಿ ಬಳಿ ಕೇಳಿ ಯಡವಟ್ಟು ಮಾಡಿಕೊಂಡಿದ್ದಾನೆ.

ಮುಂಬೈನ ಜೂನಿಯರ್ ಕಾಲೇಜ್‌ನಲ್ಲಿ ಕಾಮರ್ಸ್‌ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕಡಿಮೆ ಅಂಕ ಬಂದಿತ್ತು. ನಿನಗೆ ಹೆಚ್ಚು ಅಂಕ ಬೇಕು ಎಂದರೆ ನನಗೆ ಮುತ್ತು ಕೊಡು ಎಂದು ಶಿಕ್ಷಕ ಕೇಳಿದ್ದಾನೆ. ಇದಾದ ಬಳಿಕ ವಿದ್ಯಾರ್ಥಿನಿ ಖಿನ್ನತೆಗೆ ಒಳಗಾಗಿದ್ದಾಳೆ. ಈ ಬಗ್ಗೆ ಮನೆಯವರು ಬಲವಂತವಾಗಿ ವಿಚಾರಿಸಿದಾಗ ಶಿಕ್ಷಕನ ಬಗ್ಗೆ ವಿದ್ಯಾರ್ಥಿನಿ ಪೋಷಕರಿಗೆ ಹೇಳಿದ್ದಾರೆ.

ಕೂಡಲೆ ಪೋಷಕರು ಶಿಕ್ಷಕನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಲ್ಲದೆ. ಸೋಶಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌ ಸಹ ಆರಂಭಿಸಿದ್ದು, ಶಿಕ್ಷಕನ ವಿರುದ್ದ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕೂಡಲೆ ಎಚ್ಚೆತ್ತುಕೊಂಡ ಪೊಲೀಸರು ಕಾಮುಕ ಶಿಕ್ಷಕನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com