ಲಕ್ಷ್ಮೀನಾರಾಯಣ ನಾಗವಾರ ಕುರಿತ ಪ್ರೀತಿಯ ಹೊನಲು ಪುಸ್ತಕ ಬಿಡುಗಡೆ

ದಲಿತ ಸಂಘರ್ಷ ಸಮಿತಿಯಲ್ಲಿ ಮೂರು ದಶಕಗಳ ಕಾಲ ಹೋರಾಟ ಮಾಡಿ, ದಲಿತರು, ಶೋಷಿತರ ಪರವಾಗಿ ಚಳುವಳಿ ನಡೆಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಲಕ್ಷ್ಮೀನಾರಾಯಣ ನಾಗವಾರ ಅವರ ಕುರಿತ ಪುಸ್ತಕವನ್ನು ಇಂದು ಬಿಡುಗಡೆ ಮಾಡಲಾಗಿದೆ.

ಇಂದು ಅರಮನೆ ರಸ್ತೆಯ ಮಹಿಳಾ ವಿಜ್ಞಾನ ಕಾಲೇಜಿನ ಬಳಿಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಪಿ ನಾಗೇಂದ್ರ ಅವರ ಸಂಪಾದಕೀಯದ ಪ್ರೀತಿಯ ಹೊನಲು ಪುಸ್ತಕ ಬಿಡುಗಡೆಯಾಗಿದ್ದು, ಲಕ್ಷ್ಮೀ ನಾರಾಯಣ ನಾಗವಾರ ಅವರ ಕುರಿತ ಈ ಪುಸ್ತಕದಲ್ಲಿ ನಾಗವಾರರ ಒಡನಾಡಿಗಳು ಅವರ ಕುರಿತ ಬರಹಗಳನ್ನು, ದಲಿತ ಚಳುವಳಿಯಲ್ಲಿ ಅವರ ಸಕ್ರಿಯ ಹೋರಾಟ ಮುಂತಾದ ವಿಚಾರಗಳ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

 

 

 

Leave a Reply

Your email address will not be published.