ಹುತಾತ್ಮ ದಿನಾಚರಣೆ : ಪಾಕಿಸ್ತಾನದಲ್ಲೂ ಭಗತ್‌ ಸಿಂಗ್‌, ರಾಜ್‌ಗುರು, ಸುಖ್‌ದೇವ್‌ ನೆನಪು

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ 87ನೇ ಹುತಾತ್ಮ ದಿನವನ್ನು ಆಚರಿಸಲಾಗಿದ್ದು, ಭಗತ್‌ಸಿಂಗ್‌ ಅವರನ್ನು ರಾಷ್ಟ್ರೀಯ ನಾಯಕ ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ.

ಮಾರ್ಚ್‌ 23ರ 1931ರಂದು ಬ್ರಿಟೀಷರ ವಿರುದ್ಧ ಹೋರಾಡಿದ್ದಕ್ಕಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಗತ್‌ ಸಿಂಗ್‌, ನಿಜವಾದ ರಾಷ್ಟ್ರಭಕ್ತ, ಇಂದಿಗೂ ಅವರು ಲಕ್ಷಾಂತರ ಮಂದಿಗೆ ಸ್ಪೂರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೀಯ ನಾಯಕ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಹುತಾತ್ಮ ದಿನದ ಅಂಗವಾಗಿ ಪಾಕಿಸ್ತಾನದ ಭಗತ್‌ ಸಿಂಗ್‌ ಮೆಮೋರಿಯಲ್‌ ಫೌಂಡೇಶನ್ ಹಾಗೂ ಭಗತ್‌ ಸಿಂಗ್‌ ಫೌಂಡೇಶನ್‌ ಪಾಕಿಸ್ತಾನ್ ಸಂಘಟನೆಗಳು ಪಾಕಿಸ್ತಾನದಲ್ಲಿ ಶನಿವಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಗಲಿದ ಭಗತ್‌ ಸಿಂಗ್‌, ರಾಜ್‌ಗುರು, ಸುಖ್‌ದೇವ್ ಅವರನ್ನು ನೆನಪಿಸಿಕೊಳ್ಳಲಾಗಿತ್ತು.

ಬಿಎಸ್‌ಎಫ್‌ಪಿಯ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್‌ ಮಲಿಕ್‌ ಮಾತನಾಡಿದ್ದು, ಭಗತ್ ಸಿಂಗ್‌ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಭಗತ್‌ ಸಿಂಗ್‌ ದ್ವನಿ ಎತ್ತಿದ್ದರು. ಅವರು ಇಂದಿಗೂ ನಮ್ಮೆಲ್ಲರಿಗೂ ಸ್ಪೂರ್ತಿ ಎಂದರು.

ಇದೇ ಸಂದರ್ಭದಲ್ಲಿ ಭಗತ್‌ ಸಿಂಗ್‌, ರಾಜ್‌ ಗುರು, ಸುಖ್‌ದೇವ್‌ ಅವರನ್ನು ನೇಣಿಗೇರಿಸಿದ ಶಾದ್ಮನ್‌ ಚೌಕ್‌ಗೆ ಭಗತ್‌ ಸಿಂಗ್‌ ಚೌಕ್‌ ಎಂದು ಹೆಸರಿಡುವಂತೆ ಒತ್ತಾಯಿಸಲಾಯಿತು.

Leave a Reply

Your email address will not be published.