ISIS ಸೇರಲು ಕೇರಳದ ಯುವಕರಿಗೆ ನೆರವು : ಮಹಿಳೆಗೆ 7 ವರ್ಷ ಜೈಲುಶಿಕ್ಷೆ

ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸೇರಲು ಹೊರಟ ಕೇರಳದ ಯುವಕರಿಗೆ ಭಾರತವನ್ನು ತೊರೆಯಲು ನೆರವು ನೀಡಿದ ಆರೋಪದ ಮೇಲೆ ಮಹಿಳೆಗೆ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.  ಬಿಹಾರ ಮೂಲದ ಯಾಸ್ಮಿನ್ ಮೊಹಮ್ಮದ್ ಜಾಹಿದ್ ಹೆಸರಿನ 29 ವರ್ಷದ ಮಹಿಳೆಗೆ ಶಿಕ್ಷೆ ವಿಧಿಸಿ ಎನ್ ಐಎ ನ್ಯಾಯಾಲಯ ಆದೇಶ ನೀಡಿದೆ.

ಯಾಸ್ಮೀನ್ ಮೊಹಮ್ಮದ್ ಜಾಹಿದ್ ಮೇಲೆ ಐಸಿಸ್ ನೊಂದಿಗೆ ನಂಟು ಹೊಂದಿರುವ ಅಬ್ದುಲ್ ರಾಶಿದ್ ಎಂಬಾತನೊಂದಿಗೆ ಸೇರಿ ಸಂಚು ರೂಪಿಸಿದ ಆರೋಪವಿದೆ. ಹಾಗೆಯೇ ಐಸಿಸ್ ಸೇರಲು ಹೊರಟ ಕೇರಳದ ಕಾಸರಗೋಡಿನ ಯುವಕರಿಗೆ ಭಾರತ ತೊರೆಯಲು ನೆರವು ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಜಾರಿಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com