ನಮ್ಮ ಬೆಂಗಳೂರು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ IGP ಡಿ.ರೂಪಾ

ಬೆಂಗಳೂರು : ನಮ್ಮ ಬೆಂಗಳೂರು ಫೌಂಡೇಶನ್ ನೀಡುವ ನಮ್ಮ ಬೆಂಗಳೂರು ಪ್ರಶಸ್ತಿ ಸ್ವೀಕರಿಸಲು ಐಜಿಪಿ ಡಿ ರೂಪಾ ನಿರಾಕರಿಸಿದ್ದಾರೆ.

ಈ ಕುರಿತು ಬೆಂಗಳೂರು ಫೌಂಡೇಶನ್‌ಗೆ ಪತ್ರ ಬರೆದಿರುವ ರೂಪಾ, ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಆದರೆ ಪ್ರಶಸ್ತಿ ಭಾರೀ ಮೊತ್ತದ ನಗದು ಹೊಂದಿರುವುದರಿಂದ  ಅದನ್ನು ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ. ಪ್ರತಿಯೊಬ್ಬ ಸರ್ಕಾರಿ ನೌಕರರೂ ಯಾವುದೇ ರಾಜಕೀಯ ಅಥವಾ ರಾಜಕೀಯಕ್ಕೆ ಹತ್ತಿರದ ಸಂಘಟನೆಯಿಂದ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವಿದೆ. ಹಾಗಿದ್ದಾಗ ಮಾತ್ರ ನಾವು ನಾವುಗಳು ಜನರ ದೃಷ್ಠಿಯಲ್ಲಿ ಸರಿಯಾಗಿರಲು ಸಾಧ್ಯ. ಅಲ್ಲದೆ ಚುನಾವಣೆ ಹತ್ತಿರಬರುತ್ತಿರುವುದರಿಂದ ಪ್ರಶಸ್ತಿ, ಸನ್ಮನಗಳನ್ನ ಸ್ವೀಕರಿಸುವುದು ಸರಿಯಲ್ಲ ಎಂದಿದ್ದಾರೆ.

ಅನೇಕ  ವರ್ಷಗಳಿಂದ ಜನರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ವಿಚಾರವೇ. ನಿಮ್ಮ ಕಳಕಳಿಗೆ ಅಭಿನಂದಿಸುತ್ತೇನೆ. ನಿಮ್ಮ ಕಲಸಕ್ಕೆ ನನ್ನ ಬೆಂಬಲ ಸದಾ ಇರುತ್ತದೆ. ಆದರೆ ಪ್ರಶಸ್ತಿ ಸ್ವೀಕರಿಸದಿರುವುದಕ್ಕೆ ಕ್ಷಮೆ ನೀಡುವಂತೆ ಕೋರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com