ಮೊಹಮ್ಮದ್ ಶಮಿ ಕಾರಿಗೆ ಟ್ರಕ್ ಡಿಕ್ಕಿ : ರಸ್ತೆ ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟರ್

ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ದೆಹಲಿಯಿಂದ ಡೆಹ್ರಾಡೂನ್ ಗೆ ತೆರಳುವಾಗ ಮೊಹಮ್ಮದ್ ಶಮಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಕ್ರಿಕೆಟರ್ ಸ್ವಲ್ಪದರಲ್ಲೇ ಅನಾಹುತದಿಂದ ಪಾರಾಗಿದ್ದಾರೆ.

ಆದರೆ ಶಮಿ ತೆಲೆಗೆ ಪೆಟ್ಟಾಗಿದ್ದು 4 ಹೊಲಿಗೆಗಳನ್ನು ಹಾಕಲಾಗಿದೆ. ಮೊಹಮ್ಮದ್ ಶಮಿ ಕಳೆದೆರಡು ದಿನಗಳಿಂದ ಡೆಹ್ರಾಡೂನ್ ನಲ್ಲಿ ನೆಟ್ಸ್ ಅಭ್ಯಾಸ ನಡೆಸಿದ್ದರು. ಭಾನುವಾರ ಅಭ್ಯಾಸ ಮುಗಿಸಿಕೊಂಡು ಡೆಹ್ರಾಡೂನ್ ನಿಂದ ದೆಹಲಿಗೆ ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ.

ಶಮಿ ಪತ್ನಿ ಹಸೀನ್ ಜಹಾನ್ ಮಾಡಿದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ನಿರಾಧಾರವೆಂದು ಹೇಳಿರುವ ಬಿಸಿಸಿಐ ಐಪಿಎಲ್ ನಲ್ಲಿ ಆಡಲು ಅನುಮತಿಯನ್ನು ಸಹ ನೀಡಿತ್ತು. ಪಾಕಿಸ್ತಾನದ ಮಹಿಳೆಯಿಂದ ಹಣ ಪಡೆದು ಶಮಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಹಸೀನ್ ಆರೋಪಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com