ಈ ವಿಚಾರದಲ್ಲಿ ಅಮಿತಾಬ್‌ಗೆ ಕಿಚ್ಚ ಸುದೀಪ್‌ ಬಿಟ್ಟರೆ ಇನ್ಯಾರೂ ಸರಿಸಾಟಿ ಅಲ್ವಂತೆ ?!

ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಯಾರಿಗೆ ತಾನೆ ಗೊತ್ತಿಲ್ಲ. ಇಡೀ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲೇ ಅಚ್ಚಳಿಯದೆ ಉಳಿಯುವಂತೆ ತನ್ನದೇ ಆದ ಛಾಪನ್ನು ಮೂಡಿಸಿರುವ ನಟ. ಈ ನಟನಿಗೂ ನಮ್ಮ ಕನ್ನಡದ ಅಭಿನಯ ಚಕ್ರವರ್ತಿಗೂ ಕೆಲವೊಂದು ವಿಚಾರದಲ್ಲಿ ಸಾಮ್ಯತೆ ಇದೆ.

ಹೌದು ಅಮಿತಾಬ್‌ನಂತೆ ಕಿಚ್ಚ ಸಹ ಎತ್ತರವಿದ್ದಾರೆ. ಆ ಕಾಲದಲ್ಲಿ ಎತ್ತರ ಎಂಬ ವಿಚಾರ ಬಂದರೆ ಅಮಿತಾಬ್‌ ಎನ್ನುತ್ತಿದ್ದರು. ಆದರೆ ಅವರ ಸಾಲಿಗೆ ಅನೇಕ ನಟರ ಸೇರ್ಪಡೆಯಾಗಿದ್ದು ಅದರಲ್ಲಿ ಕಿಚ್ಚ ಸಹ ಒಬ್ಬರು.

 

ಇನ್ನು ಅಮಿತಾಬ್ ಧ್ವನಿಗೆ ಮಾರುಹೋಗದವರೇ ಇಲ್ಲ. ಅವರ ರೀತಿಯ ಧ್ವನಿ ಬೇರೆ ಯಾರಿಗೂ ಇಲ್ಲ ಎಂಬ ಮಾತಿತ್ತು. ಆದರೆ ಈಗ ಆ ಮಾತು ಸುಳ್ಳಾಗಿದ್ದು, ಕಿಚ್ಚ ಸುದೀಪ್‌ ಅಮಿತಾಬ್‌ನಂತಹ ಧ್ವನಿಯನ್ನೂ ಹೊಂದಿದ್ದಾರೆ ಎಂಬುದು ಅಭಿಮಾನಿಗಳ ಅನಿಸಿಕೆ.

ಹೌದು ಭಾರತದಲ್ಲಿ ಅಮಿತಾಬ್‌ ಬಚ್ಚನ್‌ ಬಿಟ್ಟರೆ ಸುದೀಪ್‌ ಅತ್ಯುತ್ತಮ ಧ್ವನಿ ಹೊಂದಿರುವುದಾಗಿ ತಮಿಳಿನ ಅಭಿಮಾನಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಕಾಲಿವುಡ್‌ನಲ್ಲಿ ನಿಮ್ಮ ಧ್ವನಿ ಕೇಳಲು ಕಾಯುತ್ತಿದ್ದೇನೆ. ನಿಮ್ಮ ಧ್ವನಿಯಲ್ಲೇ ನೀವು ಸಿನಿಮಾ ಮಾಡಿ. ನಿಮ್ಮ ಅಭಿನಯಕ್ಕೆ ಬೇರೆಯವರ ಧ್ವನಿ ಹೊಂದುವುದಿಲ್ಲ ಎಂದು ಸಲಹೆಯನ್ನೂ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com