ಅನಾರೋಗ್ಯಕ್ಕೀಡಾದ ನಾಯಿಯನ್ನು ಬೈಕ್‌ಗೆ ಕಟ್ಟಿ ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಮಾಲೀಕ !

ಬೆಳಗಾವಿ : ನಿಷ್ಠೆ ಅಂದ್ರೆ ನಾಯಿ ಅಂತ ಥಟ್ಟನೆ ಹೇಳ್ತಾರೆ ಆದ್ರೆ ಇಲ್ಲೊಂದು ಕಡೆ ವರ್ಷಗಟ್ಟಲೆ ಸ್ವಾಮಿ ನಿಷ್ಠೆ ಮೆರೆದ ನಾಯಿಗೆ ಕ್ರೂರ ಶಿಕ್ಷೆ ಕೊಡಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇದಾಗಿದ್ದು ಅನಾರೋಗ್ಯ ಕ್ಕೆ ತುತ್ತಾದ ಶ್ವಾನವನ್ನು ಅದರ ಮಾಲೀಕ ಬೈಕ್ ಗೆ ಕಟ್ಟಿ ಒಂದು ಕಿಲೋಮೀಟರ್‌ಗಿಂತ ಹೆಚ್ಚು ದೂರ ಎಳೆದೊಯ್ಯುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ.

ಜೀವಂತ ನಾಯಿಯನ್ನು ಎಳೆದೊಯ್ಯುತ್ತಿರುವುದನ್ನು ನೋಡಿದ ಶ್ವಾನ ಪ್ರಿಯರು ಅದರ ರಕ್ಷಣೆ ಮಾಡಿದ್ದಾರೆ.ಅನಾರೋಗ್ಯಕ್ಕೆ ತುತ್ತಾದ ನಾಯಿಗೆ ಚಿಕಿತ್ಸೆ ಕೊಡಿಸಿ ಗುಣಮುಖವಾಗಿಸುವ ಬದಲು ಹೀಗೆ ಎಳೆದೊಯ್ದಿರುವದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪ್ರಾಣಿಪ್ರಿಯರಿಂದ ಆಕ್ರೋಶ ವ್ಯಕ್ತವಾಗಿದ್ದು ನಾಯಿ ಮಾಲೀಕ ಯಾರೆ ಆಗಿದ್ದರು ಅವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com