ಬ್ರಿಟೀಷರು ದೇಶಬಿಟ್ಟು ತೊಲಗಿದ್ರೂ, ಈ ಕಾಂಗ್ರೆಸ್‌ ಪಕ್ಷ ಮಾತ್ರ ತೊಲಗುತ್ತಿಲ್ಲ : ಶ್ರೀರಾಮುಲು

ಬಳ್ಳಾರಿ : ಭಾರತಿಯ ಜನತಾ ಪಕ್ಷ ಪೊಲಿಟಿಕಲ್ ಪಾರ್ಟಿಯಲ್ಲ, ಇದು ಭಾರತವನ್ನು ರಕ್ಷಿಸುತ್ತಿರುವ ಒಂದು ಪಾರ್ಟಿ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರು ಯುವ ಪಡೆಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಯುವ ಸಮೂಹ ಕೂಡ ಮೋದಿಯವರನ್ನು ಒಪ್ಪಿಕೊಳ್ಳುತ್ತಿದೆ. ಜಿಡಿಪಿ ರೆಟ್ ನಲ್ಲಿ ಚೀನಾವನ್ನು ಮಣಿಸಿ ಇದೀಗ ಭಾರತ ಮೊದಲ ಸ್ಥಾನ ಕಾಯ್ದುಕೊಂಡಿದೆ. ಇದು ಮೋದಿಯವರ ಪರಿಶ್ರಮ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ನಮ್ಮ ಮೋದಿಯನ್ನು ಒಳ್ಳೆಯ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದಿರುವ ಶ್ರೀರಾಮುಲು, ನಮ್ಮ ಭಾರತದಲ್ಲಿ ಯುವಕ ಪಡೆ ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದರು. ಅದರೆ ಮೋದಿಯವರು ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಿ ಕೆಲಸ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನವರು 5 ವರ್ಷಗಳ ಕಾಲ ನಿದ್ದೆ ಮಾಡಿದ್ದಾರೆ. ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಎಲ್ಲಿದ್ದಾರೆಂಬುದೇ ಗೊತ್ತಿಲ್ಲ. ಸಿಎಂ ಜಾತಿ ಜಾತಿಗಳ ಮಧ್ಯೆ ತಂದಿಡುತ್ತಿದ್ದಾರೆ, ವೀರಶೈವರ ಲಿಂಗಾಯತರನ್ನು ಒಡೆದಾಳುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರು ದೇಶದಿಂದ ತೊಲಗಿದರೂ ಈ ಕಾಂಗ್ರೆಸ್ ಪಕ್ಷ ಮಾತ್ರ ತೊಲಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com