ಪಾಕಿಸ್ತಾನ ಹಾರಿಸುವ ಒಂದೊಂದು ಗುಂಡಿಗೂ ಬಾಂಬ್‌ನಿಂದ ಉತ್ತರಿಸಬೇಕು : ಅಮಿತ್ ಶಾ

ಪಾಕಿಸ್ತಾನ ಹಾರಿಸುವ ಒಂದೊಂದು ಗುಂಡಿಗೂ ಪ್ರತ್ಯುತ್ತರವಾಗಿ ಒಂದೊಂದು ಬಾಂಬ್‌ ಹಾಕಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಶನಿವಾರ ಇಂಡಿಯಾ ಟುಡೆ ನಡೆಸಿದ ಸಂದರ್ಶನದ ವೇಳೆ ಮಾತನಾಡಿದ ಅಮಿತ್ ಶಾ, ಪಾಕಿಸ್ತಾನ ಹಾರಿಸುವ ಪ್ರತೀ ಗುಂಡಿಗೂ ಭಾರತೀಯ ಸೇನೆ ಒಂದೊಂದು ಬಾಂಬ್‌ ಹಾಕುವುದರ ಮೂಲಕ ಉತ್ತರಿಸಬೇಕು. ಹೀಗೆ ಮಾಡುವುದರಿಂದ ಮಾತ್ರ ಗಡಿಯಾಚೆಗಿನ ಭಯೋತ್ಪಾದನೆ, ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನವನ್ನು ಮಟ್ಟ ಹಾಕಲು ಸಾಧ್ಯ ಎಂದಿದ್ದಾರೆ.

ಪಾಕಿಸ್ತಾನದಂತಹ ರಾಷ್ಟ್ರದೊಂದಿಗೆ ಶಾಂತಿಯ ಮಾತುಕತೆ ವ್ಯರ್ಥ. ಅದಕ್ಕಾಗಿಯೇ ಬಾಂಬ್‌ಗಳ ಮೂಲಕ ಉತ್ತರಿಸಬೇಕು. ಇನ್ನು ಉತ್ತರ ಪ್ರದೇಶದ ಉಪ ಚುನಾವಣೆಯಲ್ಲಿ ಸೋತಿದ್ದರ ಬಗ್ಗೆ ಬೇಸರವಿದೆ. ಆದರೆ ಕರ್ನಾಟಕ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com