‘ ಗಣಿಗಾರಿಕೆಯಿಂದ ಕಪ್ಪತ್ತಗುಡ್ಡವನ್ನು ಉಳಿಸಿ ‘ : ಸಂರಕ್ಷಣಾ ಸಮಿತಿಗೆ ತೋಂಟದ ಶ್ರೀಗಳ ಮನವಿ

ಗದಗ : ಕಪ್ಪತ್ತಗುಡ್ಡವನ್ನು ಗಣಿಗಾರಿಕೆಯಿಂದ ಉಳಿಸಲು ಮನವಿ ಕಪ್ಪತ್ತಗುಡ್ಡ ಸಂರಕ್ಷಣಾ ಸಮಿತಿಗೆ ತೋಂಟದ ಸಿದ್ಧಲಿಂಗ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ. ಸಮಿತಿ ಎದುರು ಬಲ್ದೋಟ ಕಂಪನಿ ಬಗ್ಗೆ ತೋಂಟದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಬಲ್ದೋಟ ಕಂಪನಿ ಕೋರ್ಟ್ ಮೆಟ್ಟಿಲೇರಿದೆ. ಆದ್ರೆ ಸರ್ಕಾರ ನೇಮಿಸಿದ ವಕೀಲರು ಹೆಚ್ಚು ಗಂಭೀರವಾಗಿ ವಾದ ಮಂಡಿಸ್ತಿಲ್ಲ. ಸರ್ಕಾರಿ ವಕೀಲರ ಗಂಭೀರತೆ ಕೊರತೆಯಿಂದ ಬಲ್ದೋಟ ಕಂಪನಿ ಕೈ ಮೇಲಾಗ್ತಿದೆ. ಸರ್ಕಾರ ಈಗಾಗಲೇ ಸಂರಕ್ಷಿತ ಅರಣ್ಯ ಅಂತ ಘೋಷಿಸಿ ಬಿಟ್ಟಿದೆ.

‘ ಕಪ್ಪತ್ತಗುಡ್ಡದಲ್ಲಿ ಬಂಗಾರವಿರೋದು ಈ ಹಿಂದಿನಿಂದಲು ಖಚಿತವಾಗಿದೆ. ಬಲ್ದೋಟ ಕಂಪನಿಗೆ ಬಂಗಾರದ ಹುಚ್ಚು ಇದೆ. ಸರ್ಕಾರದ ಮೇಲೆ ಒತ್ತಡ ಹಾಕಿ ಒಳ್ಳೆ ವಕೀಲರನ್ನು ನೇಮಿಸಬೇಕು. ಕಪ್ಪತ್ತಗುಡ್ಡ ಒಂದೇ ಈ ಭಾಗದ ಜನರಿಗೆ ಹಿಮಾಲಯವಿದ್ದಂತೆ. ಕಪ್ಪತ್ತಗುಡ್ಡ ಹಾಳದ್ರೆ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಕಷ್ಟವಾಗಲಿದೆ ‘ ಎಂದಿದ್ದಾರೆ.

ತೋಂಟದಾರ್ಯಮಠಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದ ಭರವಸೆಗಳ ಸಮಿತಿ ಭೇಟಿ ನೀಡಿದ ವೇಳೆ ವಿನಂತಿಸಿಕೊಂಡಿದ್ದಾರೆ. ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಅಹವಾಲು ಸ್ವೀಕಾರಕ್ಕಾಗಿ ಗದಗ ನಗರಕ್ಕೆ ಬಂದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com