ಸಿದ್ಧಗಂಗಾ ಶ್ರೀಗಳು ಜಾತಿ, ಧರ್ಮ ಮೀರಿದ ಸಂತ ಎಂದು ಜಗತ್ತಿಗೆ ಸಾರಿದ ಮುಸ್ಲಿಂ ಯುವಕ !

ತುಮಕೂರು : ಮುಸ್ಲಿಂ ಯುವಕನೊಬ್ಬ ಹಿಂದೂ‌‌ ಧರ್ಮಗುರುಗಳಿಗೆ ಸಂಪ್ರದಾಯದ ಪ್ರಕಾರ‌ ಪೂಜೆ ಸಲ್ಲಿಸಿ ಊರಿಗೆಲ್ಲಾ ಪಾನಕ,‌ಮಜ್ಜಿಗೆ, ಹೆಸರುಬೇಳೆ ಹಂಚಿರುವ ವಿಶೇಷ ಆಚರಣೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.

ಇರ್ಫಾನ್ ಜೆ.ಕೆ ಎಂಬ ಯುವಕನೇ ಹೀಗೆ‌ ವಿಶೇಷ ಆಚರಣೆ‌ ಮಾಡಿರುವ ಯುವಕ. ಹೌದು ಶತಾಯುಷಿ ಸಿದ್ದಗಂಗಾ ಶ್ರೀಗಳು ಬರುವ ಏಪ್ರಿಲ್ 1ರಂದು 111 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಪುತ್ಥಳಿಯಿರುವ ಬೆಳ್ಳಿರಥ‌ ನಿನ್ನೆ ಕೊಡಿಗೇನಹಳ್ಳಿಗೆ ತಲುಪಿದೆ.‌ ಇದನ್ನ ಗಮನಿಸಿದ ಮುಸ್ಲಿಂ ಯುವಕ ಇರ್ಫಾನ್‌, ಶಾಮಿಯಾನ ಹಾಕಿಸಿ ಸಿದ್ದಗಂಗಾ ಶ್ರೀಗಳ ಪುತ್ಥಳಿಗೆ ಪೂಜೆ ಸಲ್ಲಿಸಿ, ಊರಿಗೆಲ್ಲಾ ಪಾನಕ‌ ಮಜ್ಜಿಗೆ ಹಂಚಿದ್ದಾನೆ. ಈ ಮೂಲಕ ಸಿದ್ದಗಂಗಾ ಶ್ರೀಗಳು ಜಾತಿ , ಧರ್ಮ ಮೀರಿದ ಸಂತ ಅನ್ನೋದನ್ನ ಮುಸ್ಲಿಂ ಯುವಕ ಜಗತ್ತಿಗೆ ಸಾರಿ ಹೇಳಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com