ಮಮತಾ ಬ್ಯಾನರ್ಜಿ ಮೊರೆಹೋದ ಶಮಿ ಪತ್ನಿ : ಭರವಸೆ ನೀಡಿದ ಪಶ್ಚಿಮ ಬಂಗಾಳ CM

ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಶುಕ್ರವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದಾರೆ. ಹಸೀನ್ ಜಹಾನ್, ಮಮತಾ ಬ್ಯಾನರ್ಜೀ ಅವರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಭೇಟಿಯಾಗಿ 10 ನಿಮಿಷ ಪರಸ್ಪರ ಮಾತನಾಡಿದ್ದಾರೆ.

ಭೇಟಿಯ ವೇಳೆ ಮಮತಾ ಬ್ಯಾನರ್ಜಿ, ಹಸೀನ್ ಅವರಿಗೆ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಭಾವನಾತ್ಮಕ ಬೆಂಬಲ ನೀಡುವಂತೆ ಮಮತಾ ಅವರಲ್ಲಿ ಹಸೀನ್ ವಿನಂತಿಸಿಕೊಂಡಿದ್ದರು.

ಕೆಲ ದಿನಗಳ ಹಿಂದೆ ಹಸೀನ್ ಜಹಾನ್, ಪತಿ ಮೊಹಮ್ಮದ್ ಶಮಿ ವಿರುದ್ಧ ಕಿರುಕುಳ, ಮೋಸ, ಕೊಲೆ ಯತ್ನದ ಆರೋಪವನ್ನು ಹೊರಿಸಿದ್ದರು. ಅಷ್ಟೇ ಅಲ್ಲದೇ ಪಾಕಿಸ್ತಾನೀ ಮಹಿಳೆಯೊಬ್ಬರಿಂದ ಹಣ ಪಡೆದು ಶಮಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದೂ ಸಹ ಆರೋಪವನ್ನು ಮಾಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com