ದಲಿತ ಹೋರಾಟಗಾರರ ಪ್ರೀತಿಯ ಹೊನಲಿನಲ್ಲಿ ಲಕ್ಷ್ಮೀನಾರಾಯಣ ನಾಗವಾರ

ಕರ್ನಾಟಕದಲ್ಲಿ 70ರ ದಶಕದಲ್ಲಿ ಜನಪರ ಚಳುವಳಿಗಳು, ಹೋರಾಟಗಳು ನಡೆದಿದ್ದವು. ಆ ಹೋರಾಟದಲ್ಲಿ ರೂಪುಗೊಂಡ ಸಂಘಟನೆ ದಲಿತ ಸಂಘರ್ಷ ಸಮಿತಿ. ಅಂತಹ ಸಂಘಟನೆಯ ಕುಲುಮೆಯಲ್ಲಿ ಹುಟ್ಟಿಕೊಂಡ ವ್ಯಕ್ತಿಯೇ ಲಕ್ಷ್ಮೀ ನಾರಾಯಣ ನಾಗವಾರ.

ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಶೋಷಿತರ ಪರ ದನಿ ಎತ್ತುತ್ತಿದ್ದ ಲಕ್ಷ್ಮೀ ನಾರಾಯಣ ಅವರು, ಇಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಗೆ ಬಂದು ಮೂರು ದಶಕಗಳು ಕಳೆದಿದ್ದು, ಇದರ ಸವಿ ನೆನಪಿಗಾಗಿ ಲಕ್ಷ್ಮೀ ನಾರಾಯಣ ಅವರ ಸ್ನೇಹ ಬಳಗವು, ಅವರನ್ನು ಕುರಿತು ಕೃತಿಯೊಂದನ್ನು ಹೊರತರಲು ಬಯಸಿದೆ.

3 ದಶಕಗಳ ಸುದೀರ್ಘ ಹೋರಾಟದಲ್ಲಿ ಅವರ ಸಾಧನೆ, ದಲಿತರಿಗಾಗಿ ನಡೆಸಿದ ಚಳುವಳಿಗಳು, ಅದರ ಸವಿ ನೆನಪನ್ನು ಪ್ರಸ್ತುತ ಪಡಿಸಲು ಇದು ಸಕಾಲವಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಮಾಜವಾದಿ ಆಶಯಗಳಿಗೆ ಮನಸೋತು, ಶೋಷಿತರ ಪರ ದನಿಯಾಗಿ, ಸಮಾಜಕ್ಕೆ ತನ್ನಿಂದ ಏನಾದರೂ ಸಹಾಯ ಮಾಡಬೇಕೆಂಬ ಹಂಬಲವಿರುವ ಅಪರೂಪದ ವ್ಯಕ್ತಿತ್ವ ಲಕ್ಷ್ಮೀ ನಾರಾಯಣರದ್ದು. ಅವರ ಕುರಿತಾಗಿ ವಿವಿಧ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಲೇಖಕರು, ಪ್ರಗತಿಪರರಿಂದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕದ ರೂಪಕೊಟ್ಟು, ಅರಮನೆ ಮೈದಾನದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಗ್ರಂಥ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದಲ್ಲದೆ, ಮೂರು ದಶಕಗಳಲ್ಲಿ ಸಾಧನೆ ಮಾಡಿರುವ ಅವರಿಗೆ ಅಭಿನಂದನೆ ಸಲ್ಲಿಸಲು ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಇಂತಹ ಅಪರೂಪದ ಜನಪರ ಚಳುವಳಿಯ ನಾಯಕನ ಅಭಿನಂದನಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಲಾಗಿದೆ.

ಸ್ಥಳ – ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್‌ ಸ್ಕೌಟ್ಸ್ ಅಂಡ್‌ ಗೈಡ್ಸ್‌ ಸಭಾಂಗಣ, ಕರ್ನಾಟಕ ಮಹಾರಾಣಿ ವಿಜ್ಞಾನ ಕಾಲೇಜು ಪಕ್ಕ, ಅರಮನೆ ರಸ್ತೆ, ಬೆಂಗಳೂರು.

ದಿನಾಂಕ : 25-03-2018ರ ಬೆಳಗ್ಗೆ 11 ಗಂಟೆಗೆ

 

 

Leave a Reply

Your email address will not be published.

Social Media Auto Publish Powered By : XYZScripts.com