ರಾಜ್ಯಸಭಾ ಚುನಾವಣೆ : ಗೆದ್ದು ಬೀಗಿದ BJP, ಕಾಂಗ್ರೆಸ್‌, BSP ಗೆ ಮುಖಭಂಗ

ದೆಹಲಿ : 59 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟಟು 30 ಸ್ಥಾನಗಳನ್ನು ಗೆದ್ದು ವಿಜಯ ಸಾಧಿಸಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ-ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿಗೆ ಮುಖಭಂಗವಾಗಿದ್ದು. ಆಡಳಿತಾರೂಧ ಬಿಜೆಪಿಗೆ 10 ಸ್ಥಾನಗಳಲ್ಲಿ 9 ಸ್ಥಾನ ವಶಪಡಿಸಿಕೊಂಡಿದೆ.

ಸಮಾಜವಾದಿ ಪಕ್ಷದಿಂದ ಜಯಾ ಬಚ್ಚನ್‌ ಮಾತ್ರ ಗೆಲುವು ಸಾಧಿಸಿದ್ದು, ಇನ್ನುಳಿದಂತೆ ಬಿಜೆಪಿಯ ನಾಯಕರು ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾಯಾವತಿಯವರ ಬಿಎಸ್‌ಪಿಗೆ ಕಾಂಗ್ರೆಸ್‌ ಬೆಂಬಲ ನೀಡಿದರೂ ಸೋಲನುಭವಿಸಿರುವುದು ಭಾರೀ ಮುಜುಗರ ಉಂಟು ಮಾಡಿದ್ದು, ಬಿಜೆಪಿಗರ ಸಂಭ್ರಮ ಮುಗಿಲುಮುಟ್ಟಿದೆ.

ಇನ್ನು ಹೆಚ್ಚಿನ ಗೆಲುವು ಸಾಧಿಸಿರುವ ಬಿಜೆಪಿ ಸಂಸತ್ತಿನಲ್ಲಿ ವೈಯಕ್ತಿಕ ಬಲ 70ಕ್ಕೆ ಏರಿದಂತಾಗಿದೆ. ಆದರೆ ಕಳೆದ ಬಾರಿ 13 ಸ್ಥಾನ ಗಳಿಸಿದ್ದ ಕಾಂಗ್ರೆಸ್‌  ಸದಸ್ಯರ ಸಂಖ್ಯೆ 9ಕ್ಕೆ ಇಳಿದಿದ್ದು, ಒಟ್ಟು ಸ್ಥಾನ 54ರಿಂದ 50ಕ್ಕೆ ಕುಸಿದಿದೆ.

Leave a Reply

Your email address will not be published.

Social Media Auto Publish Powered By : XYZScripts.com