IPL : ಗಾಯಾಳು ಕೂಲ್ಟರ್ ನೈಲ್ ಅನುಪಸ್ಥಿತಿ : RCB ತಂಡಕ್ಕೆ ಕೋರಿ ಆ್ಯಂಡರ್ಸನ್ ಸೇರ್ಪಡೆ

ಏಪ್ರಿಲ್ 7 ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಸೀಸನ್ ಆರಂಭಗೊಳ್ಳಲಿದೆ. ಟೂರ್ನಿ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಕೂಲ್ಟರ್ ನೈಲ್ ಗಾಯಗೊಂಡಿದ್ದಾರೆ.

ಗಾಯಾಳು ಕೂಲ್ಟರ್ ನೈಲ್ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ನ್ಯೂಜಿಲೆಂಡ್ ಆಲ್ರೌಂಡರ್ ಕೋರಿ ಆ್ಯಂಡರ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಗಾಯಗೊಂಡಿರುವ ಕೂಲ್ಟರ್ ನೈಲ್ ಬದಲಿಗೆ ಮತ್ತೊಬ್ಬ ಆಟಗಾರನನ್ನು ಸೇರಿಸಿಕೊಳ್ಳಲು ಐಪಿಎಲ್ ತಾಂತ್ರಿಕ ಸಮಿತಿ ತನ್ನ ಒಪ್ಪಿಗೆಯನ್ನು ನೀಡಿದೆ.

ಜನೆವರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಬೌಲರ್ ಕೂಲ್ಟರ್ ನೈಲ್ ಅವರನ್ನು 2.20 ಕೋಟಿ ನೀಡಿ ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com