ಕಾಂಗ್ರೆಸ್‌ನಲ್ಲಿ ಬರ್ತ್‌ ಹಾಗೂ ಡೆತ್‌ ಸರ್ಟಿಫಿಕೇಟ್‌ ಇದ್ರೆ ಸಾಕು ಪ್ರಧಾನಿಯಾಗಬಹುದು : ತಾರಾ

ಬೆಳಗಾವಿ : ಕಾಂಗ್ರೆಸ್‌ನಲ್ಲಿ ಡೆಚ್‌ ಸರ್ಟಿಫಿಕೇಟ್‌, ಬರ್ತ್‌ ಸರ್ಟಿಫಿಕೇಟ್‌ ಇದ್ದರೆ ಸಾಕು ಪ್ರಧಾನಿ, ಪಕ್ಷದ ಅಧ್ಯಕ್ಷರಾಗಬಹುದು ಎಂದು ವಿಧಾನ ಪರಿಷತ್‌ ಸದಸ್ಯೆ, ನಟಿ ತಾರಾ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆದ ಮಿಲೇನಿಯಂ ಗಾರ್ಡನ್‌ನಲ್ಲಿ ನಡೆದ ರಂಗ್‌ ದೇ ಬಸಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಬಳಿಕ ಇಂದಿರಾ ಗಾಂಧಿ ಡೆತ್ ಸರ್ಟಿಫಿಕೇಟ್‌ನಿಂದ ರಾಜೀವ್‌ ಗಾಂಧಿ ಪ್ರಧಾನಿಯಾದರು. ಬಳಿಕ ರಾಜೀವ್‌ ಗಾಂಧಿ ಡೆತ್ ಸರ್ಟಿಫಿಕೇಟ್‌ ಪಡೆದು ಸೋನಿಯಾ ಎಐಸಿಸಿ ಅಧ್ಯಕ್ಷರಾದರು. ಈಗ ಸೋನಿಯಾರಿಂದ ಬರ್ತ್‌ ಸರ್ಟಿಫಿಕೇಟ್‌ ಪಡೆದ ರಾಹುಲ್‌ ಎಐಸಿಸಿಯ ಅಧ್ಯಕ್ಷರಾಗಿದ್ದಾರೆ ಎಂದು ತಾರಾ ಹೇಳಿದ್ದಾರೆ.

ಆದರೆ ಇಂತಹ ಸಂಸ್ಕೃತಿ ಬಿಜೆಪಿಯಲ್ಲಿಲ್ಲ ಎಂದಿರುವ ತಾರಾ, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶದ ಪ್ರಧಾನಿಯಾಗಬಹುದು. ಇದಕ್ಕೆ ಮೋದಿಯವರೇ ಉದಾಹರಣೆ. ರಾಜ್ಯದಲ್ಲಿ ಕಾಂಗ್ರೆಸ್‌ ನಿಂದ ಧರ್ಮ ಒಡೆಯುವ ಕೆಲಸ ನಡೆಯುತ್ತಿದೆ. ಆದರೆ ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಜನರೇ ಉತ್ತರ ನೀಡುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com