ಜಾತಿ ಒಡೆದು ಆಳ್ತಿರೋ ಸಿದ್ದರಾಮಯ್ಯಂಗೆ ನೊಬೆಲ್ ಪ್ರಶಸ್ತಿ ಕೊಡ್ಬೇಕು : ಈಶ್ವರಪ್ಪ

ಬೆಳಗಾವಿ : ನಾನು ಯಡಿಯೂರಪ್ಪ ಇಬ್ಬರು ಅಣ್ಣ ತಮ್ಮಂದಿರಂತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಶಾಸಕರೇ ನಿಮಗೆ ಬೆಲೆ ಕೊಡದಿದ್ರೇ‌ ರಾಜ್ಯದ ಜನ ನಿಮಗೆ ಬೆಲೆ‌ ಕೊಡ್ತಾರಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಾತಿ ಒಡೆದು ಆಳುವುದಕ್ಕೆ ಸಿದ್ದರಾಮಯ್ಯಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಈ ಎಂ.ಬಿ ಪಾಟೀಲ್‌ ಒಬ್ಬ ಹುಚ್ಚು ಮಂತ್ರಿ. ಆದ್ದರಿಂದ ಹುಚ್ಚನಂತೆ ಮಾತನಾಡುತ್ತಾನೆ. ಯಡಿಯೂರಪ್ಪ ಹುಚ್ಚ ಎಂಬ ಹೇಳಿಕೆಯನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಮೆದುಳಿನಲ್ಲಿ ಒಳ್ಳೆಯ ಶುಗರ್ ಕಂಟೆಂಟ್ ಯೂರಿಯಾ‌ ಗೊಬ್ಬರ ಇದೆ‌ ಎಂದು ಪುನರುಚ್ಛರಿಸಿರುವ ಅವರು, ಯೂರಿಯಾ ತಲೆಯಲ್ಲಿ ಇರೋರು ಇನ್ನೇನು ತಾನೆ ಮಾತನಾಡುತ್ತಾರೆ, ಬಿಜೆಪಿ ಬೈಯೊದೇ ಅವರ ಕೆಲಸ. ಸಮಯ ಬಂದರೆ ಬ್ರಿಗೇಡ್ ಗೆ ನಾನೂ ಸೇರಿಕೊಳ್ಳುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com