ಚುನಾವಣೆಲಿ ಸೋತರೆ ನನ್ನ ರುಂಡ ಕತ್ತರಿಸಿ ಮಾಧ್ಯಮದವರಿಗೆ ಕೊಡ್ತೀನಿ : ಜಮೀರ್ ಅಹ್ಮದ್‌

ಬೆಂಗಳೂರು : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮರಾಜಪೇಟೆ ಕ್ಷೇತ್ರದಿಂದ ಗೆಲ್ಲದಿದ್ದರೆ ನನ್ನ ತಲೆಯನ್ನು ಕತ್ತರಿಸಿಕೊಳ್ಳುವುದಾಗಿ ಶಾಸಕ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

ಆರು ಮಂದಿ ಜೆಡಿಎಸ್‌ ಬಂಡಾಯ ಶಾಸಕರ ಪೈಕಿ ನಾಲ್ವರು ಶಾಸಕರು ಇಂದು ಸ್ಪೀಕರ್‌ ಕೋಳಿವಾಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಕೂಡಲೆ ಕೋಳಿವಾಡ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದು, ಬಳಿಕ ಮಾತನಾಡಿದ ಜಮೀರ್‌ ಅಹ್ಮದ್‌, ಏಳು ಮಂದಿ ಶಾಸಕರಿಗೂ ಕಾಂಗ್ರೆಸ್‌ ಟಿಕೆಟ್‌ ನೀಡುವುದಾಗಿ ಹೇಳಿದೆ. ಈಗಾಗಲೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಪರಮೇಶ್ವರ್‌ , ಕೆ. ಸಿ ವೇಣುಗೋಪಾಲ್‌ ಅವರೇ ನಮ್ಮನ್ನು ಅಭ್ಯರ್ಥಿಗಳು ಎಂದು ಘೋಷಿಸಿರುವುದಾಗಿ ಹೇಳಿದ್ದಾರೆ.

ಅಲ್ಲದೆ ಈ ಬಾರಿ ಜೆಡಿಎಸ್‌ ಚಾಮರಾಜಪೇಟೆಯಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿ ನೋಡೋಣ. ಒಂದು ವೇಳೆ ಗೆಲ್ಲಿಸಿದರೆ ನನ್ನ ರುಂಡ ಕಡಿದು ಅಂದೇ ಮಾಧ್ಯಮದವರ ಕೈಗೆ ನೀಡುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com