ಮಿತಿ ಮೀರಿದ ಪುಂಡರ ಹಾವಳಿ : ಪ್ಯಾಂಟ್‌, ಶರ್ಟ್‌ ಬಿಚ್ಚಿ ಕಾರಿನ ಮೇಲೆ ಹತ್ತಿ ಕೂಗಾಡಿದ ಯುವಕ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು ಯುವಕನೊಬ್ಬ ಪ್ಯಾಂಟ್‌, ಶರ್ಟ್‌ ಬಿಚ್ಚಿ ಅರೆನಗ್ನನಾಗಿ ಕಾರಿನ ಮೇಲೆ ಸವಾರಿ ಮಾಡಿದ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ ಯಶವಂತಪುರ ಬಳಿ ಮದ್ಯ ಸೇವಿಸಿ, ಇಂಡಿಕಾ ಕಾರಿನಲ್ಲಿ ಆಗಮಿಸಿದ್ದ ಮೂವರು ಯುವಕರು ಪುಂಡಾಟ ಮೆರೆದಿದ್ದಾರೆ. ಅರೆನಗ್ನನಾಗಿ ಯುವಕನೊಬ್ಬ ಕಾರಿನ ಮೇಲೆ ಕುಳಿತು ಜೋರಾಗಿ ಕಿರುಚುತ್ತಾ ಬೇರೆ ಸವಾರರಿಗೆ ತೊಂದರೆ ನೀಡಿದ್ದಾನೆ.

ಆತನ ಜೊತೆಗಿದ್ದವರು ಆತನನ್ನು ಕೆಳಗಿಳಿಸುವುದು ಬಿಟ್ಟು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಪುಂಡರ ಅನುಚಿತ ವರ್ತನೆಯಿಂದಾಗಿ ವಾಹನ ಸವಾರರು ಮುಜುಗರ ಅನುಭವಿಸುವಂತಾಗಿದೆ. ಮಾಹಿತಿ ಕಲೆ ಹಾಕಿರುವ ಪೊಲೀಸರು ಯುವಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply

Your email address will not be published.