WATCH : ಮರಕ್ಕೆ ಕೈ ಕಟ್ಟಿ ಪತ್ನಿಗೆ ಥಳಿಸಿದ ಪತಿ : ಇದನ್ನು ನೋಡ್ತಾ ಮಜಾ ತಗೋತಿದ್ರು ಜನ !

ಲಖನೌ : ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಮಹಿಳೆಯನ್ನು ಥಳಿಸುವಂತೆ ಗ್ರಾಮ ಪಂಚಾಯ್ತಿಯೇ ಆದೇಶ ನೀಡಿದ್ದು, ಪಂಚಾಯ್ತಿಯ ಆದೇಶದಂತೆ ಪತಿ ತನ್ನ ಪತ್ನಿಯ ಕೈಯನ್ನು ಮರಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಬುಲಂದ್‌ ಶಹರ್‌ನಲ್ಲಿ ಘಟನೆ ನಡೆದಿದೆ. ಪತಿ ತನ್ನ ಪತ್ನಿಯ ಕೈಯನ್ನು ಮರಕ್ಕೆ ಕಟ್ಟಿ ಲೆದರ್‌ ಬೆಲ್ಟ್‌ನಿಂದ ಥಳಿಸುತ್ತಿದ್ದರೆ, ಆ ಊರಿನ ಜನ ಸುತ್ತಲೂ ನಿಂತು ನೋಡುತ್ತಿದ್ದು, ಯಾರೊಬ್ಬರೂ ಮಹಿಳೆಯ ಸಹಾಯಕ್ಕೆ ಬರದೆ ನಗುತ್ತಾ ನಿಂತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ ಮಹಿಳೆಯ ಪ್ರಜ್ಞೆ  ತಪ್ಪುವವರೆಗೂ ಹೊಡೆದಿದ್ದಾನೆ. ಇದನ್ನು ಗ್ರಾಮಸ್ಥರೊಬ್ಬರು ಇದನ್ನು ವಿಡಿಯೋ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿವಿಧ ಸೆಕ್ಷನ್‌ಗಳಡಿ ಮಹಿಳೆಯ ಗಂಡ, ಥಳಿಸಲು ಆದೇಶ ನೀಡಿದ್ದ ಗ್ರಾಮಪಂಚಾಯ್ತಿಯ ಸದಸ್ಯರು ಸೇರಿದಂತೆ ಮೂವರನ್ನು ಬಂಧಿಸಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com