Watch : ಸಚಿನ್ ಪಾದ ಮುಟ್ಟಿ ನಮಿಸಿದ ಕಾಂಬ್ಳಿ : ಬಾಲ್ಯ ಸ್ನೇಹಿತನಿಗೆ ತೆಂಡೂಲ್ಕರ್ ಮಾಡಿದ್ದೇನು?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ನಡುವಿನ ಸ್ನೇಹ ಅಭಿಮಾನಿಗಳಿಗೆಲ್ಲ ಚಿರಪರಿಚಿತ. ಬಾಲ್ಯ ಸ್ನೇಹಿತರಾದ ಸಚಿನ್ ಹಾಗೂ ಕಾಂಬ್ಳಿ 1988 ರಲ್ಲಿ ನಡೆದ ಹ್ಯಾರಿಸ್ ಶೀಲ್ಡ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ 664 ರನ್ ಜೊತೆಯಾಟವಾಡಿದ್ದರು.

ಮುಂಬೈನಲ್ಲಿ ನಡೆಯುತ್ತಿರುವ ಟಿ20 ಲೀಗ್ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಅಪರೂಪದ ಸನ್ನಿವೇಶ ಜರುಗಿದೆ. ಶಿವಾಜಿ ಪಾರ್ಕ್ ಲಯನ್ಸ್ ಹಾಗೂ ಟ್ರೈಯಂಫ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್ ತಂಡಗಳ ನಡುವೆ ಟಿ-20 ಮ್ಯಾಚ್ ನಡೆಯಿತು. ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿನ್ ಹಾಜರಿದ್ದರು. ಈ ವೇಳೆ ಶಿವಾಜಿ ಪಾರ್ಕ್ ಲಯನ್ಸ್ ತಂಡದ ಕೋಚ್ ಕಾಂಬ್ಳಿ ಸಚಿನ್ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.

ಕಾಂಬ್ಳಿ ನಡೆಯಿಂದ ಒಂದು ಕ್ಷಣ ಆಶ್ಚರ್ಯಚಕಿತರಾದ ಸಚಿನ್, ತಮ್ಮ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿಯ ಭುಜವನ್ನು ಹಿಡಿದು ಮೇಲಕ್ಕೆತ್ತಿ ಅಪ್ಪಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿನ್ – ಕಾಂಬ್ಳಿಯವರ ಆಪ್ತ ಸ್ನೇಹ ಅಭಿಮಾನಿಗಳ ಮನ ಗೆದ್ದಿದೆ.

Leave a Reply

Your email address will not be published.

Social Media Auto Publish Powered By : XYZScripts.com