ಬೇಲೂರು ಶಾಸಕ ರುದ್ರೇಗೌಡರಿಗೆ ಹೃದಯಾಘಾತ : ಸಾವು ಬದುಕಿನ ಮಧ್ಯೆ ಹೋರಾಟ

ಬೆಂಗಳೂರು :  ರಾಜ್ಯಸಭಾ ಚುನಾವಣೆಗೆಂದು ಬೇಲೂರಿನಿಂದ ಬೆಂಗಳೂರಿಗೆ ಬಂದಿದ್ದ ಶಾಸಕ ರುದ್ರೇಗೌಡ ಅವರಿಗೆ ಹೃದಯಾಘಾತ ಸಂಭವಿಸಿದ್ದು, ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಂಚಾಯಿತಿ ಸದಸ್ಯರಾಗುವ ಮೂಲಕ ರುದ್ರೇಗೌಡ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಸದಸ್ಯರಾದ ಬಳಿಕ ಒಮ್ಮೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದರು. ಜೆಡಿಎಸ್ ಪಕ್ಷದಿಂದ ಸಂಸದರಾಗಿದ್ದು, ಬಳಿಕ ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

2008 & 2013 ಎರಡು ಬಾರಿ ಶಾಸಕರಾಗಿ ಮುಂದುವರೆದಿದ್ದರು. 3-4 ವರ್ಷದ ಹಿಂದೆ ಅಂಗವೈಕಲ್ಯತೆಗೆ ಒಳಗಾಗಿದ್ದ ಇವರು, ವಿದೇಶದಲ್ಲೂ ಕೂಡ ಚಿಕಿತ್ಸೆ ಪಡೆದು ಬಂದಿದ್ದರು. ಅನಾರೋಗ್ಯ ಪೀಡಿತ ಹಿನ್ನೆಲೆಯಲ್ಲಿ ಸಹೋದರರನ್ನು ಚುನಾವಣೆಗೆ ನಿಲ್ಲಿಸಲು ಪ್ರಯತ್ನಪಟ್ಟಿದ್ದರು.

ಇಂದು ರಾಜ್ಯಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದು, ಬೆಳಗ್ಗೆ ಸ್ನಾನ ಮುಗಿಸಿ ಬರುತ್ತಿರುವಾಗ ಹೃದಯಾಘಾತ ಸಂಭವಿಸಿದೆ. ಸದ್ಯ ರುದ್ರೇಗೌಡ ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿರುವುದಾಗಿ ಹೇಳಲಾಗಿದೆ.

 

Leave a Reply

Your email address will not be published.