ಯಾವಾಗ್ಲು ಇಂಗ್ಲೀಷ್‌ ಮಾತಾಡ್ತಾನೆ ಅಂತ ಕತ್ತು ಸೀಳಿ ಗೆಳೆಯನನ್ನೇ ಹತ್ಯೆ ಮಾಡ್ಬಿಟ್ಟ ಯುವಕ !

ಮುಂಬೈ : 21 ವರ್ಷದ ಯುವಕನೊಬ್‌ಬ ತನ್ನ ಸ್ನೇಹಿತನನ್ನು 54 ಬಾರಿ ಇರಿದು ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಸ್ನೇಹಿತನನ್ನು ಕೊಂದ ಬಳಿಕ ಆರೋಪಿ ಶಾಹು ನಗರ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾನೆ.

ಕೊಲೆಯಾದ ಯುವಕನನ್ನು ಮೊಹಮ್ಮದ್‌ ಅಫ್ರೋಜ್‌ ಅಲಂ ಶೇಖ್ ಎಂದು ಹೆಸರಿಸಲಾಗಿದೆ. ಇನ್ನು ಆರೋಪಿಯನ್ನು ಅಮೀರ್ ಅಬ್ದುಲ್‌ ವಾಹಿದ್‌ ರಾಹಿನ್ ಎಂದು ತಿಳಿದುಬಂದಿದೆ.

ಅಮೀರ್ ಹೆಚ್ಚು ಓದಿರಲಿಲ್ಲ ಎಂಬ ಕಾರಣಕ್ಕೆ ಅಫ್ರೋಜ್‌ ಸದಾ ಅಮೀರ್‌ನನ್ನು ನೋಡಿ ಇಂಗ್ಲೀಷ್ ಬರುವುದಿಲ್ಲ ಎಂದು ಅಪಹಾಸ್ಯ ಮಾಡುತ್ತಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಅಮೀರ್ ಸಂಚು ರೂಪಿಸಿ ಗೆಳೆಯನನ್ನೇ ಹತ್ಯೆ ಮಾಡಿದ್ದಾನೆ.

ಬುಧವಾರ ರಾತ್ರಿ ಮದ್ಯ ಕೊಡಿಸುವುದಾಗಿ ಹೇಳಿ ರಾತ್ರಿ ಅಫ್ರೋಜ್‌ನನ್ನು ಅಮೀರ್‌ ಬಾಂದ್ರಾಗೆ ಕರೆದೊಯ್ಡಿದ್ದಾನೆ. ಬಳಿಕ ಆತನಿಗೆ ಬಿಯರ್‌ ಕೊಡಿಸಿದ ಅಮೀರ್‌ ಕುಡಿಯುತ್ತಲೇ ಸ್ನೇಹಿತನಿಗೆ 54 ಬಾರಿ ಚಾಕು ಇರಿದು ಬಳಿಕ ಕತ್ತನ್ನು ಸೀಳಿಹಾಕಿದ್ದಾನೆ.

ಬಳಿಕ ತಡರಾತ್ರಿ 1 ಗಂಟೆಯ ವೇಳೆ ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೊಲೀಸರಿಗೆ ಶರಣಾಗಿದ್ದಾನೆ.

Leave a Reply

Your email address will not be published.