ಕಳೆದು ಹೋಗಿದ್ದ ಮೋದಿ ಮಾರ್ಕ್ಸ್‌ ಕಾರ್ಡ್ ರಮ್ಯಾಗೆ ಸಿಕ್ಕಿದೆಯಂತೆ !

ಮಂಡ್ಯ : ಪ್ರಧಾನಿ ಮೋದಿಯವರ ಕಳೆದುಹೋಗಿದ್ದ ಅಂಕಪಟ್ಟಿ ಮಾಜಿ ಸಂಸದೆ ರಮ್ಯಾ ಅವರ ಕೈಗೆ ಸಿಕ್ಕಿದೆಯಂತೆ. ಹೌದು ಹೀಗಂತ ರಮ್ಯಾ ಟ್ವೀಟ್‌ ಮಾಡಿದ್ದು, ಮೋದಿ ಅವರ ಅಂಕಪಟ್ಟಿಯನ್ನೂ ಪ್ರಕಟ ಮಾಡಿದ್ದಾರೆ.

ಬ್ರೇಕಿಂಗ್‌ ನ್ಯೂಸ್ ಎಂದು ಬರೆದು ಅದರ ಕೆಳಗೆ ರಿಪೋರ್ಟ್‌ ಕರ್ಡ್‌ ಎಂಬ ಶೀರ್ಷಿಕೆ ನೀಡಲಾಗಿದ್ದು, ಅಲ್ಲಿ ಅಂಕಪಟ್ಟಿಯನ್ನು ಹಾಕಿದ್ದಾರೆ. ಇದರಲ್ಲಿ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿಯವರಿಗೆ ಗ್ರೇಡ್ ನೀಡಲಾಗಿದೆ.

ಉದ್ಯೋಗ ಸೃಷ್ಠಿ ಪರೀಕ್ಷೆಯಲ್ಲಿ ಮೋದಿಗೆ ಡಿ ಗ್ರೇಡ್‌. ರಕ್ಷಣಾ ಪರೀಕ್ಷೆಯಲ್ಲಿ ಸಿ ಗ್ರೇಡ್‌. ಆರೋಗ್ಯ ಪರೀಕ್ಷೆಯಲ್ಲಿ ಎಫ್‌ ಗ್ರೇಡ್‌. ಆರ್ಛಿಕ ಪರೀಕ್ಷೆಯಲ್ಲಿ ಎಫ್‌ ಗ್ರೇಡ್‌, ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ ಸಿ ಗ್ರೇಡ್‌, ಸ್ಟೋರಿ ಟೆಲ್ಲಿಂಗ್‌ ಪರೀಕ್ಷೆಯಲ್ಲಿ ಎ+ ಗ್ರೇಡ್‌, ಹಿಂಸೆಗೆ ಯೆಸ್‌ ಎಂದೂ, ಕೋಮುವಾದಕ್ಕೆ ಎಸ್‌ ಎಂದೂ ಗ್ರೇಡ್‌ ನೀಡಲಾಗಿದೆ,.

ಭಯಂಕರವಾದ ಈ ವ್ಯಕ್ತಿ ದೇಶವನ್ನು ಮುನ್ನಡೆಸಲು ಅಸಮರ್ಥ ಎಂದು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com