ಮಂಗಳೂರು : ಮಸಾಜ್ ನೆಪದಲ್ಲಿ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್ : 6 ಜನರ ಬಂಧನ

ಮಂಗಳೂರು : ಮಸಾಜ್ ನೆಪದಲ್ಲಿ ನಂಬಿಸಿ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ನಿವೃತ್ತ ಸರಕಾರಿ ಉದ್ಯೋಗಿಯೊಬ್ಬರಿಂದ 3 ಲಕ್ಷ ರೂ. ಸುಲಿಗೆ ಮಾಡಿದ್ದಾರೆ.

ಪ್ರಕರಣ ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದಲ್ಲಿ ಮೂವರು ಯುವತಿಯರ ಸಹಿತ ಆರು ಮಂದಿಯನ್ನು ಬಂಧಿಸಲಾಗಿದೆ. ಜೈಲ್ ರೋಡ್ ನಿವಾಸಿ ಪ್ರೀತೇಶ್ (36), ಕಳಸ ನಿವಾಸಿ ರವಿ(35), ಶಕ್ತಿನಗರ ನಿವಾಸಿ ರಮೇಶ್(35) ಬಂಧಿತರಾಗಿದ್ದಾರೆ.

ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿ ಆರೋಪಿಗಳೂ ಹಣಕ್ಕೆ ಬೇಡಿಕೆಯಿಡುತ್ತಿದ್ದರು. ಮಂಗಳೂರಿನ ಕಾವೂರು ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.

Leave a Reply

Your email address will not be published.