ಮದುವೆಗೆ ಒಂದು ದಿನ ಮುಂಚೆ ಹೆತ್ತ ಮಗಳನ್ನೇ ಇರಿದು ಕೊಂದ ತಂದೆ !

ತಿರುವನಂತಪುರಂ : ಮದುವೆಗೆ ಇನ್ನೊಂದು ದಿನ ಇದ್ದಾಗಲೇ ತಂದೆ ತನ್ನ 22 ವರ್ಷದ ಮಗಳನ್ನು ಹತ್ಯೆ ಮಾಡಿರುವ ಘಟನೆ ಕೇರಳದ ಅರೆಕೋಡ್‌ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಅತಿರಾ ಎಂದು ಹೆಸರಿಸಲಾಗಿದೆ. ಈತೆ ಪಾತನಾಪುರಂನ ನಿವಾಸಿಯಾಗಿದ್ದು, ಆರ್ಮಿಯಲ್ಲಿ ಕೆಲಸ ಮಾಡುತ್ತಿರುವ ತನ್ನ ಪ್ರಿಯಕರನ ಜೊತೆ ಈಕೆಯ ವಿವಾಹವಾಗಬೇಕಿತ್ತು. ಆತ ಬೇರೆ ಜಾತಿಯವನಾಗಿದ್ದ ಕಾರಣ ಪೋಷಕರು ಇವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ಬಳಿಕ ಅತಿರಾ ಪೋಷಕರ ಬಳಿ ಒತ್ತಾಯಿಸಿದ್ದರಿಂದ ಮದುವೆಗೆ ಪೋಷಕರು ಒಪ್ಪಿದ್ದರು. ಎಲ್ಲರ ಒಪ್ಪಿಗೆ ಮೇರೆಗೆ ಶುಕ್ರವಾರ ಇಬ್ಬರ ವಿವಾಹ ನೆರವೇರಬೇಕಿತ್ತು.
ಆದರೆ ಗುರುವಾರ ಮದ್ಯಾಹ್ನ ಅತಿರಾ ಹಾಗೂ ತಂದೆ ರಜನ್‌ ಮಧ್ಯೆ ಮದುವೆ ವಿಚಾರವಾಗಿ ಜಗಳವಾಗಿತ್ತು. ಜಗಳ ತಾರಕಕ್ಕೇರಿ ತಂದೆಯೇ ಮಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೆ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮಾರ್ಗಮಧ್ಯೆಯೇ ಅತಿರಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ತಂದೆಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com