ಬಾಹುಬಲಿ ಬಳಿಕ ರಾಜಮೌಳಿ ಮತ್ತೊಂದು ಸಿನಿಮಾ : ಮತ್ತೆ ಸಸ್ಪೆನ್ಸ್‌ ಕಾಯ್ದಿಟ್ಟ ನಿರ್ದೇಶಕ

ಹೈದರಾಬಾದ್ :ಬಾಕ್ಸ್‌ ಆಫೀಸ್‌ ಧೂಳೆಬ್ಬಿಸಿ, ಇಡೀ ವಿಶ್ವದಲ್ಲೇ ಇತಿಹಾಸ ಸೃಷ್ಠಿಸಿದ್ದ ಬಾಹುಬಲಿ ಸಿನಿಮಾ ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಇನ್ನು ಈ ಸಿನಿಮಾದ ಬಳಿಕ ನಿರ್ದೇಶಕ ರಾಜಮೌಳಿ ಯಾವ ಸಿನಿಮಾ ಮಾಡುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಿಗೆ ಬಾರೀ ಕಾತುರತೆ ಇದ್ದು, ಆ ಸಸ್ಪೆನ್ಸ್‌ ನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ.

ತಮ್ಮು ಮುಂದಿನ ಸಿನಿಮಾದ ಮೋಷನ್‌ ಪೋಸ್ಟರನ್ನು ರಾಜಮೌಳಿ ಬಿಡುಗಡೆ ಮಾಡಿದ್ದು, ಸಿನಿಮಾದಲ್ಲಿ ರಾಮ್‌ ಚರಣ್ ತೇಜಾ ಹಾಗೂ ಜೂನಿಯರ್‌ ಎನ್‌ಟಿಆರ್ ಅಭಿನಯಿಸುತ್ತಿರುವ ವಿಚಾರ ಪಕ್ಕಾ ಆಗಿದೆ. ಗುರುವಾರ ಸಂಜೆ ಈ ಕುರಿತು ರಾಜಮೌಳಿ ಟ್ವೀಟ್ ಮಾಡಿದ್ದು, ಆರ್‌ಆರ್‌ಆರ್‌ ಎಂಬ ಹೆಸರುಗಳು ಮಾತ್ರ ಈ ಪ್ರೋಮೋದಲ್ಲಿದೆ. ಇಗದು ಸಿನಿಮಾ ಹೆಸರಲ್ಲ, ಬದಲಾಗಿ ರಾಜಮೌಳಿ, ರಾಮ್‌ ಚರಣ್, ಜೂ.ಎನ್‌ಟಿಆರ್‌ ಅವರ ಹೆಸರಿನ ಮೊದಲ ಅಕ್ಷರಗಳು ಎಂದಿದ್ದಾರೆ.

ಹಾಗಾದರೆ ರಾಜಮೌಳಿ ಅವರ ಸಿನಿಮಾದ ಹೆಸರೇನು ಎಂಬ ಗುಟ್ಟನ್ನೂ ಇನ್ನೂ ಬಿಟ್ಟುಕೊಟ್ಟಿಲ್ಲ. ಅಭಿಮಾನಿಗಳ ಕಾತರ ಮತ್ತಷ್ಟು ಹೆಚ್ಚಾಗಿದ್ದು, ಬಾಹುಬಲಿ ರೀತಿಯ ಮತ್ತೊಂದು ಸಿನಿಮಾ ತೆರೆಗೆ ಬರಬಹುದಾ ಎಂದು ಕಾಯುತ್ತಿದ್ದಾರೆ.

ಈ ಹಿಂದೆ ರಾಮ್‌ ಚರಣ್‌ ಜೊತೆ ಮಗಧಿರ, ಜೂ.ಎನ್‌ಟಿಆರ್‌ ಜೊತೆ ಸ್ಟೂಡೆಂಟ್‌ 1 ಸಿನಿಮಾಕ್ಕೆ ರಾಜಮೌಳಿ ಆ್ಯಕ್ಷನ್‌ ಕಟ್‌ ಹೇಳಿದ್ದರು. ಬಾಹುಬಲಿ ಸಿನಿಮಾದ ಬಳಿಕ ಇಬ್ಬರು ಹೀರೋಗಳ ಜೊತೆ ರಾಜಮೌಳಿ ಫೋಟೋ ತೆಗೆಸಿ ಸೋಶಿಯಲ್‌  ಮೀಡಿಯಾದಲ್ಲಿ ಹಾಕಿದ್ದರು. ಈಗ ಸಿನಿಮಾ ಸೆಟ್ಟೇರುತ್ತಿರುವುದಾಗಿ ಸೂಚನೆ ನೀಡಿದ್ದಾರೆ.

ಆದರೆ ಸಿನಿಮಾದ ಹೆಸರೇನು ಎಂದು ಇನ್ನೂ ರಿವೀಲ್‌ ಮಾಡಿಲ್ಲ.

Leave a Reply

Your email address will not be published.