France : ಸೂಪರ್ ಮಾರ್ಕೆಟ್ ನಲ್ಲಿ ISIS ಉಗ್ರನ ದಾಳಿ : ಇಬ್ಬರ ಸಾವು

ಫ್ರಾನ್ಸ್ ದೇಶದ ನೈಋತ್ಯ ಭಾಗದಲ್ಲಿರುವ ಟ್ರೆಬ್ಸ್ ನಗರದ ಸೂಪರ್ ಮಾರ್ಕೆಟ್ ನಲ್ಲಿ ಶುಕ್ರವಾರ ಬಂದೂಕುಧಾರಿ ಉಗ್ರನೋರ್ವ ದಾಳಿ ನಡೆಸಿದ್ದು, 8 ಜನ ಗ್ರಾಹಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ. ಘಟನೆಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.

ದಾಳಿ ನಡೆಸಿದ ಉಗ್ರ ತಾನು ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗೆ ಸೇರಿದವನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಶುಕ್ರವಾರ ಬೆಳಿಗ್ಗೆ 11.15 ರ ಸುಮಾರಿಗೆ ಟ್ರೆಬ್ಸ್ ಪಟ್ಟಣದ ಸೂಪರ್ ಮಾರ್ಕೆಟ್ ಅನ್ನು ಪ್ರವೇಶಿಸಿದ ವ್ಯಕ್ತಿ, 8 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡು ಪೋಲೀಸರತ್ತ ಗುಂಡಿನ ದಾಳಿ ನಡೆಸಿದ್ದಾನೆ.

‘ ಪ್ರಾಥಮಿಕ ವರದಿಗಳ ಪ್ರಕಾರ ಇದು ಭಯೋತ್ಪಾದಕ ಕೃತ್ಯವೆಂದು ತೋರುತ್ತದೆ ‘ ಎಂದು ಫ್ರಾನ್ಸ್ ಪ್ರಧಾನಿ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದ್ದು, ಒತ್ತೆಯಾಳುಗಳನ್ನು ಬಿಡಿಸಿ, ಉಗ್ರನನ್ನು ಹೊಡೆದುರುಳಿಸುವ ಯತ್ನವನ್ನು ಪೋಲೀಸರು ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com