ರಾಜ್ಯಸಭಾ ಚುನಾವಣೆ : ಆರು ರಾಜ್ಯಗಳಲ್ಲಿ ಬಿರುಸಿನಿಂದ ಸಾಗಿದ ಮತದಾನ

ದೆಹಲಿ : ತೀವ್ರ ಕುತೂಹಲ ಕೆರಳಿಸಿರುವ ಆರು ರಾಜ್ಯಗಳ ರಾಜ್ಯಸಭಾ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದೆ.
25 ಸ್ಥಾನಗಳಿಗೆ  ಚುನಾವಣೆ ನಡೆಯುತ್ತಿದ್ದು, ಕರ್ನಾಟಕ, ಉತ್ತರ ಪ್ರದೇಶ, ಜಾರ್ಖಂಡ್‌, ಛತ್ತೀಸ್‌ಗಢ, ತೆಲಂಗಾಣ ರಾಜ್ಯಗಳಲ್ಲಿ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಆಯಾ ರಾಜ್ಯದ ಜನಪ್ರತಿನಿಧಿಗಳು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಅನೇಕ ರಾಜ್ಯಗಳ ಪಕ್ಷಗಳಿಗೆ ರಾಜ್ಯಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಬಿರುಸಿನ ಪೈಪೋಟ್ ನಡೆಯುತ್ತಿದೆ.
ಇನ್ನು ಕರ್ನಾಟದಲ್ಲಿ ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿಯಿಂದ ರಾಜೀವ್‌ ಚಂದ್ರಶೇಖರ್‌. ಕಾಂಗ್ರೆಸ್‌ನಿಂದ ಎಲ್‌. ಹನುಮಂತಯ್ಯ, ನಾಸಿರ್‌ ಹುಸೇನ್‌ ಹಾಗೂ ಜಿ.ಸಿ ಚಂದ್ರಶೇಖರ್‌ ಸ್ಪರ್ಧೆ ನಡೆಸಿದ್ದರೆ, ಜೆಡಿಎಸ್‌ನಿಂದ ಬಿ.ಎಂ ಫಾರೂಕ್‌ ಕಣಕ್ಕಿಳಿದಿದ್ದಾರೆ.

Leave a Reply

Your email address will not be published.