20 ಶಾಸಕರ ಅನರ್ಹತೆ ಪ್ರಕರಣ : ದೆಹಲಿ ಹೈಕೋರ್ಟ್‌ನಿಂದ AAP ಗೆ ಬಿಗ್ ರಿಲೀಫ್‌

ದೆಹಲಿ : ಲಾಭದಾಯಕ ಹುದ್ದೆಯಲ್ಲಿದ್ದ ಕಾರಣ ಆಮ್‌ ಆದ್ಮಿ ಪಕ್ಷದ ದೆಹಲಿ ಸರ್ಕಾರದ 20 ಶಾಸಕರನ್ನು ಅನರ್ಹಗೊಳಿಸಿದ್ದ ಚುನಾವಣಾ ಆಯೋಗದ ಆದೇಶವನ್ನು ದೆಹಲಿ ಕೋರ್ಟ್‌ ತಳ್ಳಿ ಹಾಕಿದ್ದು, ಇದರಿಂದಾಗಿ ಕೇಜ್ರಿವಾಲ್‌ ಸರ್ಕಾರಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ.

ಚುನಾವಣಾ ಆಯೋಗದ ಶಿಫಾರಸ್ಸಿನ ಪ್ರಕಾರ ರಾಷ್ಟ್ರಪತಿ ಕಾರ್ಯಾಲಯವು 20 ಶಾಸಕರನ್ನು ಅನರ್ಹಗೊಳಿಸಿತ್ತು. ಈ ಆದೇಶವನ್ನು ದೆಹಲಿ ಹೈಕೋರ್ಟ್‌ ತಳ್ಳಿ ಹಾಕಿದೆ. ಇದರಿಂದಾಗಿ 20 ಆಪ್‌ ಶಾಸಕರು ತಮ್ಮ ಶಾಸಕತ್ವ ಉಳಿಸಿಕೊಂಡಿದ್ದು, ಕೇಜ್ರಿವಾಲ್‌ಗೆ ಭಾರೀ ತಲೆನೋವು ತಪ್ಪಿದಂತಾಗಿದೆ. ಆದರೆ ಇದೇ ತೀರ್ಪು ಅಂತಿಮವಾದುದಲ್ಲ, ಲಾಭದಾಯಕ ಹುದ್ದೆಗಳ ಆರೋಪದ ಬಗ್ಗೆ ಚುನಾವಣಾ ಆಯೋಗ ಮತ್ತೊಮ್ಮೆ ಯೋಚಿಸುವ ಅಗತ್ಯವಿರುವುದಾಗಿ ಸೂಚಿಸಿದೆ.

ಈ ಬಗ್ಗೆ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ. ಜನರ ಆಯ್ಕೆಯನ್ನು ಅಸಮರ್ಪಕ ರೀತಿಯಲ್ಲಿ ಅನರ್ಹಗೊಳಿಸಲಾಗಿತ್ತು. ನ್ಯಾಯಾಲಯ ಜನರಿಗೆ ನ್ಯಾಯ ನೀಡಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com