ಈ ಐಪಿಎಲ್ ತಂಡದ ಪರವಾಗಿ ಆಡುವುದು ಕಾರ್ತಿಕ್ ಕನಸಂತೆ….!

ನಿದಾಹಾಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ತಂದುಕೊಟ್ಟ ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಕೋಟ್ಯಂತರ ಅಭಿಮಾನಿಗಳ ಪಾಲಿನ ಹೀರೋ ಎನಿಸಿಕೊಂಡಿದ್ದರು. ಏಪ್ರಿಲ್ 7 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾರ್ತಿಕ್ ‘ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಆಡುವ ಕನಸನ್ನು ಹೊಂದಿದ್ದೇನೆ ‘ ಎಂದು ಹೇಳಿದ್ದಾರೆ. ‘ ಐಪಿಎಲ್ ಆರಂಭದ ಸೀಸನ್ ನಿಂದಲೂ ಚೆನ್ನೈ ಪರವಾಗಿ ಆಡುವ ಅವಕಾಶ ದೊರೆಯಬಹುದೆಂದು ಅಂದುಕೊಂಡಿದ್ದೆ, ಆದರೆ 10 ವರ್ಷ ಕಳೆದರೂ ಅದು ಸಾಧ್ಯವಾಗಿಲ್ಲ ‘ ಎಂದಿದ್ದಾರೆ.

Leave a Reply

Your email address will not be published.