Flipkart ನಿಂದ ಮಹಾಮೋಸ : ಮೊಬೈಲ್‌ ಬುಕ್‌ ಮಾಡಿದ್ರೆ ಬಂದಿದ್ದು ಮಾತ್ರ ಖಾಲಿ ಬಾಕ್ಸ್‌ !

ಬೆಳಗಾವಿ :  ಫ್ಲಿಪ್ ಕಾರ್ಟ್ ಆನ್ಲೈನ್ ಶಾಪಿಂಗ್ ಮಾಡಿ ವ್ಯಕ್ತಿಯೋರ್ವ ಮೋಸ ಹೋಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.

ಫ್ಲಿಪ್ ಕಾರ್ಟ್ ಮೂಲಕ ಲೆನೊವೊ ನೋಟ್ ಮೊಬೈಲ್ ಫೋನ್ ಆರ್ಡರ್ ಮಾಡಿದ್ದ ವರ್ಧಮಾನ ಬಾಲೋಜಿ ಎಂಬುವರಿಗೆ ಮೊಬೈಲ್ ಬದಲು ಖಾಲಿ ಇರುವ ಲೆನೊವೊ ಕಂಪನಿಯ ಬಾಕ್ಸ್ ನ್ನು ಮಾತ್ರ ಕಳಿಸಿ ಕೊಡಲಾಗಿದೆ. ಇನ್ನು ಇದೇ ಕಂಪನಿಯಿಂದ ಒಂದು ಬಾರಿ ಮೋಸ ಹೋಗಿದ್ದ ಕಾರಣ ಈ ಬಾರಿ ಎಚ್ಚೆತ್ತುಕೊಂಡು ಫ್ಲಿಪ್ ಕಾರ್ಟ್ ಕಂಪನಿಯವರು ಕಳಿಸಿದ್ದ ಪ್ಯಾಕ್ ನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಪ್ಯಾಕ್ ಬಿಚ್ಚಿದಾಗ ಫ್ಲಿಪ್ ಕಾರ್ಟ್ ಕಳಿಸಿದ್ದ ಪಾರ್ಸೆಲ್‌ನಲ್ಲಿ ಕೇವಲ ಖಾಲಿ ಬಾಕ್ಸ್ ಮಾತ್ರ ಇದ್ದಿದ್ದು ಕಂಡು ಬಂದಿದೆ.

ಹಣ ನೀಡಿಯೇ ಪಾರ್ಸೆಲ್ ಪಡೆದಿದ್ದ ವರ್ಧಮಾನ್, ಹಣವು ಇಲ್ಲ ಇತ್ತ ಮೊಬೈಲು ಸಿಗದೇ ಮೋಸ ಹೋಗಿದ್ದಾರೆ. ಹಣ ಪಡೆದ ಕೊರಿಯರ್ ಕಂಪನಿ ಅವರು ನಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇನ್ನೂ ಫ್ಲಿಪ್ ಕಾರ್ಟ್ ಮೋಸಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವ ಕುಡಚಿ ಪಟ್ಟಣ ನಿವಾಸಿ ವರ್ಧಮಾನ್ ಈ ಕುರಿತು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

Leave a Reply

Your email address will not be published.