ವಿಧಾನಸಭಾ ಚುನಾವಣೆಗೆ ಪ್ರಜಾ ಕಲ್ಯಾಣ ಪಕ್ಷದಿಂದ D.K ರವಿ ತಾಯಿಗೆ ಟಿಕೆಟ್‌

ಬೆಂಗಳೂರು : ನಿಗೂಢವಾಗಿ ಸಾವಿಗೀಡಾಗಿದ್ದ ಐಎಎಸ್‌ ಅಧಿಕಾರಿ ಡಿ.ಕೆ ರವಿ ಅವರ ತಾಯಿ ಗೌರಮ್ಮ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಭಾರತೀಯ ಪ್ರಜಾ ಕಲ್ಯಾಣ ಪಕ್ಷ ಈ ಬಾರಿ ಗೌರಮ್ಮ ಅವರಿಗೆ ಕೋಲಾರ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಹೇಳಲಾಗಿದ್ದು, ಅಲ್ಲದೆ ಇತರೆ 42 ವಿಧಾನಸಭಾ ಕ್ಷೇತ್ರಗಳಲ್ಲೂ ಭಾರತೀಯ ಪ್ರಜಾ ಕಲ್ಯಾಣ ಪಕ್ಷ ಸ್ಪರ್ಧಿಸುವುದಾಗಿ ಹೇಳಿದೆ.

ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ವತಃ ಗೌರಮ್ಮ ಹೇಳಿದ್ದಾರೆ. ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗೌರಮ್ಮ, ಈಗಾಗಲೆ ಕೋಲಾರ ಜಿಲ್ಲೆಯಿಂದ ತಾನು ಸ್ಪರ್ಧಿಸುವುದಾಗಿ ಪ್ರಚಾರ ಮಾಡಲಾಗಿದೆ. ಚುನಾವಣೆಗೆ ನಿಂತಿರುವುದರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನ್ನ ಮಗನ ಜನಪರ ಕೆಲಸಗಳೇ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com